ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸತತ ಅಧ್ಯಯನದಿಂದ ಭವಿಷ್ಯ ಉಜ್ವಲ: ಬಣಕಾರ

Mainashree
Updated On : 21 Jan 2014, 12:16 pm

ಹಿರೇಕೆರೂರು: ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ವಿದ್ಯೆಯು ಪ್ರಮುಖ ಘಟ್ಟವಾಗಿದೆ. ಅದರಲ್ಲೂ ಪದವಿಪೂರ್ವ ಹಂತ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ ಸತತ ಅಧ್ಯಯನದ ಮೂಲಕ ಉತ್ತಮ  ಅಂಕಗಳಿಸಿದರೆ ಮಾತ್ರ ಭವಿಷ್ಯ ಉಜ್ವಲಗೊಳ್ಳಲಿದೆ. ವಿದ್ಯಾರ್ಥಿಗಳು ಸದಾ ಕ್ರೀಯಾಶೀಲರಾಗಿ ಅಧ್ಯಯನ ಮಾಡುವಂತೆ ಶಾಸಕ ಯು.ಬಿ. ಬಣಕಾರ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪಪೂ ಕಾಲೇಜಿನ 2013-14ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಹೊರತರಲು ಉಪನ್ಯಾಸಕರು ಹೆಚ್ಚಿನ ಶ್ರಮ ವಹಿಸಬೇಕು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಸ್.ಪಿ. ಗೌಡರ ಮಾತನಾಡಿ, ಪದವಿಪೂರ್ವ ಹಂತ ವಿದ್ಯಾರ್ಥಿ ಜೀವನದ ಮುಖ್ಯ ಗುರಿಯತ್ತ ಸಾಗಲು ಉತ್ತಮ ಮಾರ್ಗವಾಗಿದೆ. ಈ ಸಂದರ್ಭದಲ್ಲಿ ಏಕಾಗ್ರತೆಯಿಂದ ವಿಷಯಗಳನ್ನು ಮನದಟ್ಟ ಮಾಡಿಕೊಳ್ಳಬೇಕು ಎಂದರು,
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರವಿ ಚಿಂದಿ, ಸದಸ್ಯರಾದ ಮಹದೇವಪ್ಪ ರಾಯ್ಕರ್, ರೇಣುಕಾ ಡಾಂಗೇ, ರೇಣುಕಾ ಉಪ್ಪಿನಮಾಳಿ, ಎಂ.ಎ. ಖತೀಬ, ಸಿದ್ದು ಚಿಂದಿ, ಸುಮಾ ಪೂಜಾರ, ಟಿ.ಎಚ್. ಪೂಜಾರ, ಪ್ರಾಚಾರ್ಯ ಅಪ್ರೋಜ್ ಅಲಿಖಾನ್ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement