ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವ್ಯಕ್ತಿತ್ವ ರೂಪಿಸಿಕೊಳ್ಳಿ: ಜಯದೇವ ಅಗಡಿ

Mainashree
Updated On : 24 Jan 2014, 10:38 am

ಶಿಗ್ಗಾಂವಿ: ಮನುಷ್ಯ ತನ್ನ ಉದ್ಯೋಗ ಮತ್ತು ಪರಿಸರಕ್ಕೆ ಸೀಮಿತಗೊಂಡು, ಮನಸ್ಸಿನ ಭಾರ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅದರಿಂದ ಹೊರಬಂದು, ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಸಾವಯವ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಜಯದೇವ ಅಗಡಿ ಕರೆ ನೀಡಿದರು.
ಪಟ್ಟಣದ ಮಾಮ್ಲೆದೇಸಾಯಿ ಸಂಯುಕ್ತ ಪಪೂ ಕಾಲೇಜು ಸಭಾಭವನದಲ್ಲಿ ಜರುಗಿದ ಜೆಸಿಐ ಶಿಗ್ಗಾಂವಿ ಘಟಕದ 2014ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಂಕ್ರಗೌಡ ಪಾಟೀಲ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಜೆಸಿಐ ವಲಯ ಪೂರ್ವಾಧ್ಯಕ್ಷ ಚಂದ್ರಾಮಪ್ಪ ಪ್ರಮಾಣ ವಚನ ಬೋಧಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಿ. ಚನ್ನಪ್ಪ ಅವರಿಗೆ ನಿಕಟಪೂರ್ವ ಅಧ್ಯಕ್ಷ ಡಾ೤ ಜಿ.ಸಿ ನಿಡಗುಂದಿ ದಂಡ, ಕೊರಳುಪಟ್ಟಿ ನೀಡಿ, ಅಧಿಕಾರ ಹಸ್ತಾಂತರಿಸಿದರು. ಜೇಸಿರೆಟ್ ಡಾ೤ ಲತಾ ಜಿ. ನಿಡಗುಂದಿ ಅವರು ಸಿ.ಎನ್. ಹೇಮಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷೆ ಸವಿತಾ ರಮೇಶ, ನಿಕಟಪೂರ್ವ ಉಪಾಧ್ಯಕ್ಷ ಡಿ. ಪ್ರಕಾಶ್, ಜಿ.ಎನ್. ಯಲಿಗಾರ, ಎಸ್.ಎನ್. ಮುಗಳಿ, ಡಾ೤ ಡಿ.ಎ. ಗೊಬ್ಬರಗುಂಪಿ, ಡಾ೤ ಕೆ.ಎಚ್. ಪಾಟೀಲ, ಮಲ್ಲಿಕಾರ್ಜುನ ನೀಲಗುಂದ, ರಾಘವೇಂದ್ರ ದೇಶಪಾಂಡೆ, ಬಾಬಾಜಾನ ಹುಲಗೂರ, ಡಾ೤ ಎಚ್.ಜಿ. ಪಾಟೀಲ, ಪುರಸಭೆ ಮಾಜಿ ಉಪಾಧ್ಯಕ್ಷ ದಯಾನಂದ ಅಕ್ಕಿ, ಡಾ೤ ಬಿ.ಕೆ. ಪ್ರಶಾಂತ ಇದ್ದರು. ಬಿ.ಐ. ಅಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement