ಕರಾಟೆ ಪಟುಗಳಿಗೆ ಪ್ರಾಯೋಗಿಕ ಪರೀಕ್ಷೆ, ಬೆಲ್ಟ್ ವಿತರಣೆ
ಹಾವೇರಿ: ಶ್ರೀರಾಮ್ ಕರಾಟೆ ಸ್ಕೂಲ್, ಇಂಟರ್ನ್ಯಾಷನಲ್ ಶೋಟಕಾನ್ ಕರಾಟೆ ಮತ್ತು ಕಲಾರಿಪಟ್ಟು ಸಂಘದ ಆಶ್ರಯದಲ್ಲಿ ಶನಿವಾರ ಇಲ್ಲಿನ ಸೀತಾರಾಮ ಮಂಗಲ ಕಾರ್ಯಾಲಯದಲ್ಲಿ ಕರಾಟೆ ಕ್ರೀಡಾಪಟುಗಳ ಪ್ರಾಯೋಗಿಕ ಪರೀಕ್ಷೆಗಳು ನಡೆದವು.
ಮುಖ್ಯ ತರಬೇತುದಾರ ರಮೇಶ ಡಿ.ಜಿ., ಇಸ್ಕಾ ಸಂಸ್ಥೆಯ ಅಧ್ಯಕ್ಷ ಉಡಚಪ್ಪ ಮಾಳಗಿ, ಜಿ.ಎನ್. ಜಂಗಳಿ, ಶಿವಾನಂದ, ಕೃಷ್ಣಪ್ಪ ಹಡಪದ ಕರಾಟೆ ಪಟುಗಳಿಗೆ ವಿವಿಧ ಬೆಲ್ಟ್ಗಳನ್ನು ವಿತರಿಸಿದರು.
ಮಾಲತೇಶ, ಕೀರ್ತಿ ಜಂಗಳಿ, ಸುದೀಶ ಉಪ್ಪಾರ, ವರುಣ್ ಜಂಗಳಿ, ದರ್ಶನ ಉಪ್ಪಾರ, ಮೋಹನ್ ಕುಂಚಿಕೋರ, ಅಜಯ ಕೋಳೂರ, ಶ್ರಯಿಸ್ ಖಾನ್, ಬಸವರಾಜ ಗುತ್ತಲ, ರವಿ ಕಬಾಡಿ, ಪ್ರವೀಣ ಹಾವೇರಿ, ವೆಂಕಟೇಶ ಹಾವೇರಿ, ಅನುಷಾ ಮಾಳಗಿ, ವಿನಯ ದಂಡಿನ್, ಆದಿತ್ಯ ಹಲಗಣ್ಣನವರ, ಶ್ರವಣ ಜೋಗಿ, ಐಶ್ವಯ ಅಂಗಡಿ, ದಾನೇಶ್ವರಿ ಅಂಗಡಿ, ಶಿವಕುಮಾರ ರಾಮನಶೆಟ್ಟಿ, ದೀಪಕ ನಾಗಮ್ಮನವರ, ಸಂಗೀತಾ ಕಿತ್ತೂರಮಠ, ಶಿವರಾಜ ಲಮಾಣಿ, ಸಿದ್ದಲಿಂಗೇಶ ಹಲಗಣ್ಣನವರ, ನಾಗರಾಜ ಪೂಜಾರ, ವಿಕಾಸ ಹಡಪದ, ಅಜಯ್ ನಾಗಮ್ಮನವರ, ಅಕ್ಷಯ ಬನ್ನಿಹಳ್ಳಿ, ಸಾಗರ ಅಂಗಡಿ, ಮಂಜುನಾಥ ದೊಡ್ಡಮನಿ ಹಾಗೂ ರಾಕೇಶ ದೊಡ್ಡಮನಿ ಬೆಲ್ಟ್ ಪಡೆದರು.