ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿ: ಯುವ ಕಾಂಗ್ರೆಸ್‌ನಿಂದ ವಿದ್ಯಾ ಸಹಾಯಹಸ್ತ

Vishwanath S
Updated On : 29 Jan 2014, 11:11 am

ಹಾವೇರಿ: ಯುಪಿಎ ಸರ್ಕಾರ ರೂಪಿಸಿರುವ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಬಡ ಮಕ್ಕಳು ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯಲು ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ವಿದ್ಯಾ ಸಹಾಯಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಯುವ ಕಾಂಗ್ರೆಸ್‌ನ ಹಾವೇರಿ ಲೋಕಸಭಾ ಕ್ಷೇತ್ರದ ಅಧ್ಯಕ್ಷ ನಾಸೀರಖಾನ್ ಪಠಾಣ ತಿಳಿಸಿದರು.
ಸರ್ವ ಶಿಕ್ಷಣ ಅಭಿಯಾನದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾಂಗ್ರೆಸ್ ಸರ್ಕಾರದ ಕೊಡುಗೆ. ಇದರಿಂದ ಬಡ ಮಕ್ಕಳು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗಿದೆ. ಆದರೆ ಬಿಜೆಪಿ ಸರ್ಕಾರ ಈ ಕಾಯ್ದೆ ಅನುಷ್ಠಾನ ಮಾಡುವಲ್ಲಿ ವಿಫಲವಾದ ಕಾರಣ ಸಾವಿರಾರು ಸೀಟುಗಳು ಖಾಲಿ ಉಳಿದಿವೆ. ಮಾಹಿತಿ ಕೊರತೆಯೂ ಇದಕ್ಕೆ ಕಾರಣವಾಗಿದೆ. ಯುವ ಕಾಂಗ್ರೆಸ್ ಆರ್‌ಟಿಇ ಕಾಯ್ದೆ ಕುರಿತು ಮಾಹಿತಿ ನೀಡಲು ಫೆ. 8ರ ವರೆಗೆ ಎಲ್ಲ ತಾಲೂಕುಗಳಲ್ಲಿ ವಿದ್ಯಾ ಸಹಾಯಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಎಷ್ಟು ಸೀಟು ಲಭ್ಯವಿದೆ ಎಂಬುದನ್ನು ಬಿಇಒಗಳಿಂದ ಮಾಹಿತಿ ಪಡೆಯಲಾಗುವುದು. ಆರ್‌ಟಿಇ ಅಡಿಯಲ್ಲಿ ಶಾಲಾ ಪ್ರವೇಶಕ್ಕೆ ಆಸಕ್ತರಿಗೆ ಅರ್ಜಿ ನಮೂನೆ ನೀಡುವುದು, ಅರ್ಜಿ ಭರ್ತಿ ಮಾಡಲು, ಅಗತ್ಯ ದಾಖಲಾತಿ ಹಾಗೂ ಸಮೀಪದ ಶಾಲೆಗಳಲ್ಲಿ ಖಾಲಿಯಿರುವ ಸೀಟುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಸಹಾಯವಾಣಿ (ನಾಸೀರಖಾನ್: 99729 78050, ಮಂಜುನಾಥ ಮುಳಗುಂದ: 99720 00613, ಎಂ.ಎಂ. ಹಿರೇಮಠ: 9448364773) ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲು ತಿಳಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ವಿವೇಕ್, ನಿಖಿಲ್, ಅಸ್ಲಾಂ, ಸಮೀಉಲ್ಲಾ ಮಲ್ಲಾರ, ಹುಸೇನಸಾಬ್ ಜಿಗರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement