ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಬಿಗರ ಚೌಡಯ್ಯ ದೇವಸ್ಥಾನ ನಿರ್ಮಾಣಕ್ಕೆ ಅನುದಾನ

Lingaraj Badiger
Updated On : 31 Jan 2014, 10:57 am

ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ದೇವಸ್ಥಾನ ನಿರ್ಮಾಣಕ್ಕೆ ಶಾಸಕರ  ನಿಧಿಯಿಂದ ರು. 3 ಲಕ್ಷ ಹಾಗೂ ಹೊಸಕಟ್ಟಿಲ್ಲಿರುವ ಗಂಗಾಮತ ಸಮಾಜದ ದೇವಸ್ಥಾನದ ನಿರ್ಮಾಣಕ್ಕೆ ಆರಾಧನಾ ಯೋಜನಯಡಿ ರು. 1 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ತಾಲೂಕಿನ ರಟ್ಟಿಹಳ್ಳಿಯ ಗಂಗಾಮತ ಮತ್ತು ನಿಜ ಶರಣ ಅಂಬಿಗರ ಚೌಡಯ್ಯ ಸಂಘದಿಂದ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣ ಬಸವಣ್ಣನವರ ಸಮಕಾಲೀನರಾದ ನಿಜ ಶರಣ ಅಂಬಿಗರ ಚೌಡಯ್ಯ ಸಮಾಜ ಸುಧಾರಣೆಗೆ ನೇರ, ನಿಷ್ಠುರ ನುಡಿಯಲ್ಲಿ ವಚನಗಳನ್ನು ರಚಿಸಿದರು. ಅವರು ಸಾಹಿತ್ಯದಿಂದ ಸಮಾಜ ಶ್ರೀಮಂತಗೊಳಿಸಿದ್ದಾರೆ. ಅಂಥವರ ಜಯಂತಿ ಮಾಡಿದರೆ ಸಾಲದು ಅವರು ಸಮಾಜಕ್ಕೆ ನೀಡಿದ ಆದರ್ಶ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಬರೀ ಕಾನೂನಿನ ಮೂಲಕ ಸಮಾಜದ ಸುಧಾರಣೆ ಅಸಾಧ್ಯ, ಮಠ, ಮಾನ್ಯಗಳಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಬಿ.ಸಿ. ಪಾಟೀಲ ಮಾತನಾಡಿ, 12ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದು, ಸಮಾಜದಲ್ಲಿ ಸಮಾನತೆ ಸಾರಿದ ಮಹಾನುಭಾವರಾಗಿದ್ದಾರೆ. ಶರಣರ ವಚನ ಸಾಮಾಜಿಕ ಚಿಂತನೆ ಮೊದಲಾದ ಸದ್ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಶಂಕರಗೌಡ ಚನ್ನಗೌಡ್ರ, ಮಾಜಿ ಅಧ್ಯಕ್ಷ ಎಸ್.ಬಿ. ಪಾಟೀಲ, ಮುಖಂಡ ಯು.ಯು. ಬಣಕಾರ, ಎಚ್.ಎಚ್, ಜಾಡರ, ಲಿಂಗರಾಜ ಚಪ್ಪರದಳ್ಳಿ ಮೊದಲಾದವರು ಅಂಬಿಗರ ಚೌಡಯ್ಯನವರ ಕುರಿತು ಮಾತನಾಡಿದರು.
ನಿಜ ಶರಣ ಅಂಬಿಗರ ಚೌಡಯ್ಯನವರ ಪೀಠಾಧಿಪತಿ ನರಸಿಪುರದ ಶಾಂತಮುನಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡ ಲಕ್ಷ್ಮ ಸುಣಗಾರ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಹರವಿಶೆಟ್ಟರ್, ಪ್ರಕಾಶ ಸುಣಗಾರ, ಬಿ.ಕೆ. ಸುಣಗಾರ, ಪರಶುರಾಮ ಜಾಡರ, ರವೀಂದ್ರ ಮುದಿಯಪ್ಪನವರ, ಗಣೇಶ ವೆರ್ಣೇಕರ, ಸುರೇಶ ಬೆಣ್ಣಿ, ಗದಿಗೆಪ್ಪ ಸಾವಕ್ಕಳವರ, ಮಂಜಪ್ಪ ಮುದಿಯಪ್ಪನವರ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕುಮದ್ವತಿ ನದಿಯಿಂದ ಕುಂಭ ಮೆರವಣೆಗೆ ಮುಖಾಂತರ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ಜೂನಿಯರ್ ರಾಜಕುಮಾರ್ ಅಶೋಕ ಬಸ್ತಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement