ಬಿಜೆಪಿಯಿಂದ ನಮೋ ಟೀ ಸ್ಟಾಲ್
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 30
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕದ ಕಾರ್ಯಕರ್ತರು ಗುರುವಾರ ನಗರದಲ್ಲಿ ನಮೋ ಚಾಯ್ ಸ್ಟಾಲ್ ಪ್ರಾರಂಭಿಸಿ ಕೇಂದ್ರದ ಮಾಜಿ ಸಚಿವ ಮಣಿಶಂಕರ ಅಯ್ಯರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ಗೀತಾ ಜೂಜಗಾಂವ ಉದ್ಘಾಟಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ಮಾತನಾಡಿ, ಬಿಜೆಪಿಯವರು ಚಹಾ ಮಾರಿ ದೇಶ ಕಟ್ಟುತ್ತಾರೆ. ಕಾಂಗ್ರೆಸ್‌ನವರು ದೇಶ ಮಾರಿ ಬದುಕುತ್ತಿದ್ದಾರೆ. ನರೇಂದ್ರ ಮೋದಿ ಅವರೊಬ್ಬರೆ ಅಲ್ಲದೇ ಬಿಜೆಪಿಯ ಎಲ್ಲ ಕಾರ್ಯಕರ್ತರು ಚಹಾ ಮಾರುವ ಮೂಲಕ ಕೇಂದ್ರ ಮಾಜಿ ಸಚಿವ ಮಣಿಶಂಕರ ಅಯ್ಯರ್ ಅವರ ಹೇಳಿಕೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಕಾಂಗ್ರೆಸ್ ನಾಯಕರ ಹೇಳಿಕೆ ಖಂಡಿಸಿದರು.
ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರ್ಡೇಕರ, ನಗರ ಘಟಕದ ಅಧ್ಯಕ್ಷ ವೆಂಕಟೇಶ ದೈವಜ್ಞ, ಮಧುಕರ ನವಲೆ, ಪ್ರಭು ಹಿಟ್ನಳ್ಳಿ, ಜ್ಯೋತಿ ಸಾತೇನಹಳ್ಳಿ, ಫಕ್ಕೀರಪ್ಪ ತಾಂಡೂರ, ಕರಬಸಪ್ಪ ಹಳದೂರ, ಲಲಿತಾ ಗುಂಡೇನಹಳ್ಳಿ, ನಜಬುನ್ನಿಸಾ ನದಾಫ್, ಚೇತನ ಕುರುಬಗೊಂಡ, ಕೆ.ಸಿ. ಕೋರಿ, ಸುರೇಶ ಹೊಸಮನಿ, ಸಾಗರ ಅಂಗಡಿ ಇತರರು ಇದ್ದರು. ಸಾರ್ವಜನಿಕರಿಗೆ ಟೀ ನೀಡಲಾಯಿತು.