ಅಂಧಾನುಕರಣೆ ನಿರ್ಮೂಲನೆ ಮಾಡಿ: ಬಸವಶಾಂತಲಿಂಗ ಶ್ರೀ
ಹಾವೇರಿ: ಅಜ್ಞಾನ ಅವಿವೇಕ, ಅನಾಚಾರ, ಅಸ್ಪೃಶ್ಯತೆ ಇಂಥ ಅಂಧಾನುಕರಣೆ ನಿರ್ಮೂಲನೆಗಾಗಿ ಆಧ್ಯಾತ್ಮಿಕ, ಧಾರ್ಮಿಕ ತಳಹದಿಯ ಅರಿವು ಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು.
ಅವರು ನಗರದ ಹೊಸಮಠದ ಬಸವಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಶರಣ ಸಂಗಮ ಹಾಗೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಸಮಾನತೆ ಅನುಭವ ಮಂಟಪ ಕಟ್ಟಿದರು. ಈ ಪರಂಪರೆಯಲ್ಲಿ ಡಾ. ಫ.ಗು. ಹಳಕಟ್ಟಿಯವರು ಬಸವಾದಿ ಶರಣರ ವಚನಗಳನ್ನು ರಚಿಸಿ ಕೊಟ್ಟರು. ಅವುಗಳನ್ನು ಸಂಶೋಧಿಸಿ ರಕ್ಷಿಸಿ ಮನೆಮನಗಳಿಗೆ ವಚನದ ಅರಿವನ್ನು ಮೂಡಿಸುವಲ್ಲಿ ಡಾ. ಫ.ಗು. ಹಳಕಟ್ಟಿಯವರು ಪಾತ್ರ ಪ್ರಮುಖ ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಉಪನ್ಯಾಸ ನೀಡಿದರು. ಅಥಿತಿಗಳಾಗಿ ಭಾಗವಹಿಸಿದ ನೂತನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಎಂ. ಬಸವರಾಜ ಅವರನ್ನು ಸನ್ಮಾನಿಸಲಾಯಿತು. ಬಸವಕೇಂದ್ರ ಎಲ್ಲ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.