ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಾಲ್ಯವಿವಾಹಕ್ಕೆ ತಡೆ

Mainashree
Updated On : 5 Jul 2014, 10:02 am

ಬ್ಯಾಡಗಿ: ಅಪ್ರಾಪ್ತೆಯೊಬ್ಬಳ ಮದುವೆಯನ್ನು ಪೊಲೀಸರ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ತಡೆದ ಘಟನೆ ಶುಕ್ರವಾರ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ವೇತಾ ಕ್ರಿಸ್ತಾನಂದ ಚಿಂದನಾಳ ಎಂಬ 16 ವರ್ಷದ ಬಾಲಕಿಯನ್ನು ಅದೇ ಗ್ರಾಮದ ಹನುಮಂತ ಶಿವಪ್ಪ ಬಣಕಾರ ಎಂಬಾತನ ಜತೆ ಜು. 7ರಂದು ಧರ್ಮಸ್ಥಳದ ಶ್ರೀ ಮಂಜುನಾಥನ ದೇವಸ್ಥಾನದಲ್ಲಿ ಮದುವೆ ಮಾಡಲು ಸಿದ್ಧತೆ ಮಾಡಿದ್ದರು ಎನ್ನಲಾಗಿದೆ.
ಕ್ರಿಶ್ಚಿಯನ್ ಧರ್ಮದ ಶ್ವೇತಾ ಮತ್ತು ಹಿಂದೂ ಧರ್ಮದ ಹನುಮಂತ ನಡುವೆ ಪ್ರೇಮಾಂಕುರವಾಗಿದ್ದು, ಶ್ವೇತಾ ಅಪ್ರಾಪ್ತೆಯಾಗಿದ್ದರಿಂದ ಯಾರಿಗೂ ತಿಳಿಯದಂತೆ ದೂರದ ಧರ್ಮಸ್ಥಳದಲ್ಲಿ ಮದುವೆ ನಡೆಸಲು ನಿರ್ಧರಿಸಿದ್ದರು.
ಮಕ್ಕಳ ರಕ್ಷಣಾ ಘಟಕದ ಸಹಕಾರ: ಮದುವೆ ನಿಲ್ಲಿಸುವಂತೆ ಶ್ವೇತಾಳ ತಾಯಿ ಸುಹಾಸಿನಿ ಗ್ರಾಮದ ಮುಖ್ಯಸ್ಥರಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಬದಲಾಗಿ, ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ ಈಕೆಯನ್ನು ಗುರುವಾರ ರಾತ್ರಿ ಹನುಮಂತನ ಮನೆಗೆ ಕರೆತರಲಾಗಿತ್ತು ಎನ್ನಲಾಗಿದೆ. ತಾಯಿ ಸುಹಾಸಿನಿ ಮಕ್ಕಳ ರಕ್ಷಣಾ ಘಟಕದ ಮುಖ್ಯಸ್ಥೆ ಗ್ಲ್ಯಾಡಿಸ್ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳ ಸಹಕಾರದೊಂದಿಗೆ ಮದುವೆ ತಡೆದಿದ್ದಾರೆ.
    ಸುದ್ದಿ ತಿಳಿದು ಪೊಲೀಸರೊಂದಿಗೆ ಬುಡಪನಹಳ್ಳಿ ಗ್ರಾಮಕ್ಕೆ ತೆರಳಿದ ಜಿಲ್ಲಾ ನಿರೂಪಣಾಧಿಕಾರಿ ಎಂ.ಎನ್. ಮಾಳಗೇರ, ವರನ ಮನೆಯಲ್ಲಿ ಬಚ್ಚಿಡಲಾಗಿದ್ದ ಶ್ವೇತಾಳನ್ನು ವಶಕ್ಕೆ ತೆಗೆದುಕೊಂಡು ಹಾವೇರಿ ಬಾಲ ಮಂದಿರಕ್ಕೆ ಒಪ್ಪಿಸಿದರು.
ತಲೆಮರೆಸಿಕೊಂಡ ವರ: ಪೊಲೀಸರು ತನಿಖೆ ನಡೆಸಲು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ವರ ಮಹಾಶಯ ಹನುಮಂತ ತಲೆಮರೆಸಿಕೊಂಡಿದ್ದಾನೆ. ಸಿಪಿಐ ಹಾಲಮೂರ್ತಿರಾವ್, ಪಿಎಸ್‌ಐ ಗಿರೀಶ್, ಸಿಬ್ಬಂದಿ ಸನದಿ, ನಾಡರ, ಶಿವಣ್ಣ, ಮಮತಾ ಗುಡಗೂರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement