ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಾಹೀರಾತು ಪ್ರಕಟಿಸಿ ಮಳಿಗೆ ಬಾಡಿಗೆ ನೀಡಿ

Mainashree
Updated On : 10 Jul 2014, 9:13 am

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕವೇ ಬಾಡಿಗೆ ನೀಡುವಂತೆ ಆಗ್ರಹಿಸಿ ಸಾರ್ವಜನಿಕರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹನುಮಂತಪ್ಪ ದೇಸೂರ ಮಾತನಾಡಿ, ಗ್ರಾಪಂ ಕಾರ್ಯಾಲಯವು 13ನೇ ಹಣಕಾಸಿನ ಯೋಜನೆಯಡಿ ಗ್ರಾಮದ ಬಸ್ ನಿಲ್ದಾಣದ ಬಳಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹರಾಜು ಪ್ರಕ್ರಿಯೆ ನಡೆಸದೆಯೇ ಒಳಗಿಂದೊಳಗೆ ಕಾನೂನು ಬಾಹಿರವಾಗಿ ಬಾಡಿಗೆ ನೀಡುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.
ಸುಮಾರು 17 ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸಾಕಷ್ಟು ನಿರುದ್ಯೋಗಿ ಪದವೀಧರ ಯುವಕರಿದ್ದು, ಉದ್ಯೋಗಕ್ಕಾಗಿ ಬೇರೆಡೆ ಅಲೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸ್ವಯಂ-ಉದ್ಯೋಗಕ್ಕಾಗಿ ಸಹಕಾರಿಯಾಗಿದ್ದು, ಹರಾಜು ಪ್ರಕ್ರಿಯೆ ನಡೆಸಿಯೇ ಮಳಿಗೆ ಬಾಡಿಗೆ ನೀಡುವಂತೆ ಆಗ್ರಹಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ವರ್ತನೆ ನೋಡಿದರೆ ಕಾಣದ ಕೈಗಳು ಅವರನ್ನು ಬಂಧಿಸಿಟ್ಟಿರುವ ಅನುಮಾನಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಈ ಹಿಂದೆ ಕೂಡ ಕೆಲ ಮಳಿಗೆಗಳನ್ನು ಒತ್ತಡಕ್ಕೆ ಮಣಿದು ಹರಾಜು ನಡೆಸದೇ ನೀಡಲಾಗಿದ್ದು, ಈ ಬಾರಿ ಪುನರಾವರ್ತನೆಯಾದಲ್ಲಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸುವುದಾಗಿ ಮನವಿಯಲ್ಲಿ ಎಚ್ಚರಿಸಿದರು.
ರಾಜೇಸಾಬ್ ಗುತ್ತಲ, ಮಾಲತೇಶ ಬ್ಯಾಡಗಿ, ಶಿದ್ದಪ್ಪ ಎಲಿ, ಮೌನೇಶ ಬೆಳವಿಗಿ, ರಾಜನಗೌಡ ಪಾಟೀಲ, ಚಂದ್ರಣ್ಣ ಉಪ್ಪಾರ, ಇಬ್ರಾಹಿಂ ಕಾಸಂಬಿ, ಹೇಮಣ್ಣ ನವಣಕ್ಕಿ, ಈರಯ್ಯ ಹಿರೇಮಠ, ಕ್ರಿಸ್ತಾನಂದ ಮಾಳಗಿ, ಈರಣ್ಣ ಬಳ್ಳಾರಿ, ಚಂದ್ರಣ್ಣ ಹಿತ್ತಲಮನಿ, ರವಿ ನೆಗಳೂರ, ಫಕ್ಕೀರೇಶ ಗಿರಿಯಮ್ಮನವರ, ರಾಜೇಶ ಹಾವೇರಿಮಠ, ಆರ್.ಎಲ್. ಕುಂಠೆ, ಮಂಜಣ್ಣ ಬಟ್ಟಲಕಟ್ಟಿ, ದ್ಯಾಮಪ್ಪ ಕುರಿಯವರ, ರಾಜು ಮಡಿವಾಳವರ, ಶಿವರಾಜ ಗುಡಗೂರ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement