ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಳೆಗಾಗಿ ಕುಡುಪಲಿ ಗ್ರಾಮಸ್ಥರ ಭಜನೆ

Mainashree
Updated On : 10 Jul 2014, 9:14 am

ಹಿರೇಕೆರೂರು: ಮುನಿಸಿಕೊಂಡಿರುವ ಮಳೆರಾಯನನ್ನು ಒಲಿಸಿಕೊಳ್ಳಲು ಈ ಭಾಗದ ರೈತರು ವಿವಿಧ ಸಂಪ್ರದಾಯಗಳನ್ನು ಆಚರಿಸುತ್ತಿದ್ದಾರೆ. ಸಮೀಪದ ಕುಡುಪಲಿ ಗ್ರಾಮದಲ್ಲಿ ವರುಣದೇವನ ಕೃಪೆಗಾಗಿ ಇಲ್ಲಿನ ರೇವಣಸಿದ್ಧೇಶ್ವರ ಮಠದ ಭಜನಾ ಸಂಘದವರು 3 ದಿನ ರಾತ್ರಿ ಗ್ರಾಮದಲ್ಲಿ ಭಜನೆ ಮಾಡಿದರು. ರೇವಣಸಿದ್ಧೇಶ್ವರ ಮಠದಿಂದ ಪ್ರಾರಂಭವಾದ ಭಜನೆ ಗ್ರಾಮದ ಹಲವಾರು ಕಡೆ ಸಂಚರಿಸಿ ಪುನಃ ಮಠದ ಆವರಣಕ್ಕೆ ಬಂದು ತಲುಪಿತು.
ಮಠದ ಮುಖ್ಯಸ್ಥ ಕರಬಸಪ್ಪ ರಾಮಗಿರಿ ಮಾತನಾಡಿ, ಉತ್ತಮ ಆರಂಭ ಪಡೆದಿದ್ದ ಮುಂಗಾರು ಮಳೆ ಈಗ ಕೈಕೊಟ್ಟಿದ್ದರಿಂದ ರೈತರು ಕಷ್ಟ ಅನುಭವಿಸುವ ಸ್ಥಿತಿ ಬಂದಿದೆ. ಸಾವಿರಾರು ರುಪಾಯಿ ವೆಚ್ಚ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಕಳೆದ 15-20 ದಿನದಿಂದ ಮಳೆ ಬಾರದೆ ಬಿತ್ತಿದ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಪೂಜೆ, ಪುನಸ್ಕಾರ ಮಾಡುತ್ತಿದ್ದರೂ ಮಳೆರಾಯ ಮಾತ್ರ ಕಣ್ಣು ತೆರೆಯುತ್ತಿಲ್ಲ. ಈಗ ಮಳೆ ಬಾರದೆ ಹೋದರೆ ರೈತರಿಗೆ ತುಂಬಾ ನಷ್ಟವಾಗುತ್ತದೆ. ಮಳೆಯರಾಯನ್ನು ಒಲಿಸಿಕೊಳ್ಳಲು ಗ್ರಾಮದಲ್ಲಿ ಭಜನೆ ಮಾಡುತ್ತ ಸಂಚರಿಸುತ್ತಿದ್ದೇವೆ ಎಂದರು.  
ಭಜನಾ ಕಾರ್ಯಕ್ರಮದಲ್ಲಿ ಶಶಿಸ್ವಾಮಿ ಮಠದ ನೇತೃತ್ವದಲ್ಲಿ ಬಸನಗೌಡ ಕರೇಗೌಡ್ರ, ರಾಮಪ್ಪ ಸೊಂಡೇರ, ಉಪನ್ಯಾಶಕ ಕೋಟೇಶ ಚಲವಾದಿ, ಹನುಮಂತಪ್ಪ ಹೊಸಕುರುಬರ, ನಾಗಪ್ಪ ಹೊಸಕುರುಬರ, ಗುಡ್ಡಪ್ಪ ಡಮ್ಮಳ್ಳಿ, ಮೌನೇಶ ಕೊಣನತೆಲಿ, ಮಲ್ಲನಗೌಡ ಗುಳದಳ್ಳಿ ಸಂಘದ ಭಕ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement