ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀರು ಕೇಳಿದರೆ ಹಾಲು ಕೊಡುವ ಸಂಸ್ಕೃತಿ ನಮ್ಮದು: ಮುದ್ದಿ

Lingaraj Badiger
Updated On : 17 Jul 2014, 10:56 am

ಶಿಗ್ಗಾಂವಿ: ನೀರನ್ನು ಕೇಳಿದರೆ ಹಾಲು ಕೊಡುವಂಥ ಸಂಸ್ಕೃತಿ ನಮ್ಮದು ಎಂದು ರಾಣಿಬೆನ್ನೂರು ವಿವೇಕ ಜಾಗೃತ ಬಳಗದ ಅಧಿಕಾರಿ ಮೃತ್ಯುಂಜಯ ಮುದ್ದಿ ಅಭಿಪ್ರಾಯ ಪಟ್ಟರು.
ಪಟ್ಟಣದ ರೇಣುಕಾಚಾರ್ಯ ಮಠದಲ್ಲಿ ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ 11 ದಿನಗಳ ಕಾಲ ಮನೆ ಮನೆಯಲ್ಲಿ ಡಿವಾಯಿನ್ ಪಾರ್ಕ್‌ನ ಗುರೂಜಿಗಳ ಆಜ್ಞೆಯಂತೆ ವರುಣನ ವೃತ ಮಾಡಿ 11ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಗಾಲದಿಂದ ಬೇಸತ್ತ ಅನ್ನದಾತನಿಗೆ ಬೇಕಾಗಿರುವುದು ಮಳೆ. ವರುವಣನ ಮನಸ್ಸು ಗೆಲ್ಲಬೇಕೆಂದರೆ ಗುರುವಿನ ಗುಲಾಮರಾಗಬೇಕು. ಭಕ್ತಿ, ಭಾವದಿಂದ ವರುಣನ ಕೂಗಿ ಕರೆದರೆ ಬರದೆ ಇರಲಾರ.. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಲ್ಲಳು. ಮಾತೆ ಗುರುವಿನ ಸಮಾನಳು ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಾವೇರಿ ಜಿಲ್ಲೆಯ ವಿವೇಕ ಜಾಗೃತ ಬಳಗದ ಮಹಿಳಾ ಅಧಿಕಾರಿ ಭಾರತಿ ವರ್ದಮಾನ ಛಬ್ಬಿ ಮಾತನಾಡಿ, ವರುಣ ದೇವನಲ್ಲಿ ನಾವೆಲ್ಲರೂ ನಮ್ರತೆಯನ್ನಿಟ್ಟು ನಾವು ನಿನ್ನ ಮಕ್ಕಳಲ್ಲವೇ? ನಮ್ಮ ಮೇಲೆ ಕರುಣೆ ಇಲ್ಲವೇ?, ಬಾ ತಂದೆ ಧರೆಗೆ ತಂಪು ಮಾಡು ಸಮೃದ್ಧ ಬೆಳೆ ಕೊಟ್ಟು ಕಾಪಾಡಯ್ಯಾ ಎಂದು ಮುಗ್ದತೆಯಿಂದ ಬೇಡಿದಾಗ ವರುಣ ಬಂದೆ ಬರುತ್ತಾನೆ. ಆ ನಿಟ್ಟಿನಲ್ಲಿ ಗುರೂಜೀಯವರ ಆಜ್ಞೆಯಂತೆ ವರುಣನ ಮೊರೆ ಹೋಗಿದ್ದು ಅದರ ಫಲವಾಗಿ ರಾಜ್ಯದ ತುಂಬೆಲ್ಲ ವರುಣನ ಆಗಮನವಾಗಿರುವುದು ರೈತನ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ ಎಂದರು. ವಿಜಯಲಕ್ಷ್ಮೀ ಹೆಸರೂರ ಅಧ್ಯಕ್ಷತೆ ವಹಿಸಿದ್ದರು. ಜಾಗೃತ ಬಳಗದ ಸದಸ್ಯರಾದ ರುದ್ರಗೌಡ ಮೆಳ್ಳಾಗಟ್ಟಿ, ಅನಿತಾ ಖುರ್ಷಾಪುರ ಸುನಂದಾ ಪಾಟೀಲ್, ಲಲಿತಾ ಮೆಳ್ಳಾಗಟ್ಟಿ, ಶೋಭಾ ಹಿರೇಣ್ಣವರ್, ನಾಗರಾಜ ದುಂಡಸಿ, ಗಿರಿಜಾ ದುಂಡಸಿ, ಹೇಮಾವತಿ ಗಾಣಗೇರ, ವಿನೋದಾ ಪಾಟೀಲ್, ಸುಮಂಗಲಾ ಹೂಗಾರ, ಪ್ರೇಮಾ ಬನ್ನಿಕೋಪ್ಪ, ಹಳೆಪೇಟೆ ಓಣಿಯ ರೈತ ಮುಖಂಡರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement