ಹಾವೇರಿ

ಕುಸಿದ ಕುಡಿವ ನೀರಿನ ಹೊಂಡದ ತಡೆಗೋಡೆ

ಬ್ಯಾಡಗಿ: 15 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪಟ್ಟಣದ ಕುಡಿಯುವ ನೀರಿನ ಹೊಂಡದ ಪೂರ್ವ ಭಾಗದ ತಡೆಗೋಡೆ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಹೊಂಡದ ಮೇಲ್ಭಾಗದಲ್ಲಿ ಸತತ ಮಳೆ ನೀರು ನಿಂತಿರುವುದೇ ಘಟನೆ ಜರುಗಲು ಕಾರಣವೆನ್ನಲಾಗುತ್ತಿದ್ದು, ನೂರಾರು ವರ್ಷದ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದು ಜನರಲ್ಲಿ ಆತಂಕ ಹಾಗೂ ಕುತೂಹಲ ಮೂಡಿಸಿದೆ. ಘಟನೆಯಿಂದ ಪೂರ್ವ ಭಾಗದಲ್ಲಿನ ಸುಮಾರು 12 ಅಡಿಗಳಷ್ಟು ಆಳ ಹಾಗೂ 5 ಅಡಿ ಅಗಲದಷ್ಟು ಗೋಡೆ ಸಹಿತ ಮಣ್ಣು ನೀರಿನಲ್ಲಿ ಮುಳುಗಿದೆ. ಎಂದಿನಂತೆ ಹೊಂಡದಲ್ಲಿ ನೂರಾರು ಜನರು ತುಂಬುತ್ತಿದ್ದ ಸಂದರ್ಭದಲ್ಲೇ ನೋಡು ನೋಡುತ್ತಿದ್ದಂತೆ ಗೋಡೆ ಕುಸಿದು ಬಿದ್ದಿದೆ. ಇದರಿಂದ ಆತಂಕಗೊಂಡ ಜನರು ನೀರು ತುಂಬುವುದನ್ನು ಬಿಟ್ಟು ಮೇಲಕ್ಕೆ ಓಡಿ ಹೋದರು ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಹೊಂಡಕ್ಕೆ ಹೊಂದಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿರುವ ಜನರು ಮಾತ್ರ ಇನ್ನೂ ಆತಂಕದಿಂದ ಹೊರ ಬಂದಿಲ್ಲ ವರ್ಷಗಟ್ಟಲೇ ಪಟ್ಟಣದ ಜನರಿಗೆ ಕುಡಿಯುವ ನೀರೊದಿಗಿಸುವ ಹೊಂಡವು ಜನರ ಜೀವನಾಡಿಯಾಗಿದೆ. ಹೀಗಾಗಿ ಕುಸಿದು ಬಿದ್ದಿರುವ ಗೋಡೆ ನೋಡಲು ಸಾವಿರಾರು ಜನರು ಮುಗಿಬಿದ್ದರು.
1992ರಲ್ಲಿಯೂ ಸದರಿ ಗೋಡೆ ಕುಸಿದು ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆದರೆ, ಅಂದು ನಡೆಸಿದ ಕಳಪೆ ಕಾಮಗಾರಿಯ ಪರಿಣಾಮ ಮತ್ತೊಮ್ಮೆ ಸಾರ್ವಜನಿಕರಿಗೆ ಧಕ್ಕೆ ನೀಡಿದೆ. ಇದೀಗ ಎರಡನೇ ಬಾರಿ ಗೋಡೆ ಬಿದ್ದಿರುವುದರಿಂದ ಈಗಲಾದರೂ ಗುಣಮಟ್ಟದ ಹಾಗೂ ಕಾಮ
ಗಾರಿ ಮಾಡುವ ಮೂಲಕ ಭದ್ರ ಬುನಾದಿ ಹಾಕುವಂತೆ ಪ್ರತ್ಯಕ್ಷದರ್ಶಿ ಗಂಗಣ್ಣ ಎಲಿ ಆಗ್ರಹಿಸಿದ್ದಾರೆ.
ಅಧಿಕಾರಿಗಳ ಭೇಟಿ: ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಜಿ.ಟಿ. ವೀರೇಶ್‌ಕುಮಾರ, ಕಿರಿಯ ಅಭಿಯಂತ ನಿರ್ಮಲ ನಾಯಕ್ ಹಾಗೂ ಸದಸ್ಯರು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸುಮಾರು 32 ಆಳವಿರುವ ಹೊಂಡವು ಸದಾಕಾಲ ತುಂಬಿರುತ್ತದೆ. ಹೀಗಾಗಿ ಪಂಪ್‌ಸೆಟ್‌ಗಳ ಮೂಲಕ ಕನಿಷ್ಠ 3ರಿಂದ 4 ಅಡಿಗಳಷ್ಟು ನೀರನ್ನು ಹೊರ ಹಾಕಲು ನಿರ್ಧರಿಸಿದ್ದಾರಲ್ಲದೇ, ಕುಸಿತ ತಡೆದು ನಿಲ್ಲಿಸುವ ಉದ್ದೇಶದಿಂದ ಕಳಚಿ ಬಿದ್ದಿರುವ ಭಾಗವನ್ನು ಮರಳಿನಿಂದ ತುಂಬಲಾಗುತ್ತಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT