ಬ್ಯಾಡಗಿಯಲ್ಲಿ ಗಂಗಾಪರಮೇಶ್ವರಿ ಜಯಂತ್ಯುತ್ಸವ
ಬ್ಯಾಡಗಿ: ಗಂಗಾಪರಮೇಶ್ವರಿ ಜಯಂತ್ಯುತ್ಸವ ಅಂಗವಾಗಿ ಗಂಗಾಮತಸ್ಥ ಸಮಾಜ ಜನರು ಪಟ್ಟಣದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಿದರು. ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಸಾಗಿದ ಸಮಾಜದ ಮಹಿಳೆಯರು ಕುಡಿಯುವ ಹೊಂಡದಲ್ಲಿ ಗಂಗಾಪೂಜೆ ನೆರವೇರಿಸಿದರು. ಬಳಿಕ ಸಕಲ ವಾದ್ಯವೈಭವದೊಂದಿಗೆ ಗಂಗಾಪರಮೇಶ್ವರಿ ಭಾವಚಿತ್ರ ಮೆರವಣಿಗೆಯನ್ನು ಚಾವಡಿ ರಸ್ತೆ, ಮುಖ್ಯರಸ್ತೆ ಬಳಸಿ ಭರಮದೇವರ ದೇವಸ್ಥಾನದವರೆಗೂ ಸಾಗಿತು. ಮಧ್ಯದಲ್ಲಿ ಪಟ್ಟಣದ ಎಲ್ಲ ದೇವಸ್ಥಾನ ಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಮಂಜಣ್ಣ ಬಾರ್ಕಿ, ಬಸವರಾಜ ಸುಣಗಾರ, ಮಾಲತೇಶ ಬಾರ್ಕಿ, ಮಂಜುನಾಥ ಬೋವಿ, ಜಯಣ್ಣ ಬಾರ್ಕಿ, ಶಿವಣ್ಣ ಬಾರ್ಕಿ, ಎಸ್.ಎಂ. ಬಾರ್ಕಿ, ಶಂಕರ ಬಾರ್ಕಿ, ಜಿತೇಂದ್ರ ಸುಣಗಾರ, ಮೌನೇಶ ಕಬ್ಬೇರ, ಜಯಪ್ಪ ಸುಣಗಾರ, ಮಂಜುನಾಥ ಬಾರ್ಕಿ, ಕುಮಾರ ಸುಣಗಾರ, ಅನಿಲ ಸುಣಗಾರ, ಟಿ.ಪಿ. ರಾಣಿಬೆನ್ನೂರು, ರಾಜು ಸೂಡಿ ಇನ್ನಿತರರು ಉಪಸ್ಥಿತರಿದ್ದರು.
ಇಂದು ಗೃಹ ಸಚಿವರು ಜಿಲ್ಲೆಗೆ
ಹಾವೇರಿ: ಹಾನಗಲ್ಲ ತಾಲೂಕು ಆಡೂರ ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನೆ ಜೂ. 16ರಂದು ಆಡೂರು ಪೊಲೀಸ್ ಠಾಣೆಯಲ್ಲಿ ಜರುಗಲಿದ್ದು, ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಮನೋಹರ ತಹಸೀಲ್ದಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ಪರಶಿವಮೂರ್ತಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಅತಿಥಿಗಳಾಗಿ ಸಂಸದರಾದ ಶಿವಕುಮಾರ ಉದಾಸಿ, ಪ್ರಹ್ಲಾದ ಜೋಶಿ, ಶಾಸಕರಾದ ಕೆ.ಬಿ. ಕೋಳಿವಾಡ, ಬಸವರಾಜ ಶಿವಣ್ಣನವರ, ಬಸವರಾಜ ಬೊಮ್ಮಾಯಿ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ವಿಪ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಸೋಮಣ್ಣ ಬೇವಿನಮರದ, ಜಿಪಂ ಅಧ್ಯಕ್ಷೆ ವೀರೇಶ್ವರಿ ಸುಳ್ಳಳ್ಳಿ, ಹಾನಗಲ್ಲ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಆಡೂರು ಗ್ರಾಪಂ ಅಧ್ಯಕ್ಷೆ ವಿಮಲಾಕ್ಷಿ ಗೋಣಗೇರ, ಜಿಪಂ ಉಪಾಧ್ಯಕ್ಷೆ ಶೋಭಾ ನಿಸ್ಸಿಮಗೌಡ್ರ, ಸದಸ್ಯ ಮಹಾದೇವ ಭಾಗಸರ ಮತ್ತಿತರರು ಆಗಮಿಸುವರು.
ಸ್ವಯಂ ರಕ್ಷಣೆಗೆ ಕರಾಟೆ ಅತ್ಯಗತ್ಯ: ಮಾಳಗಿ
ಹಾವೇರಿ: ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಹೀಗಾಗಿ ಮಹಿಳೆಯರು ಸ್ವಯಂ ರಕ್ಷಣೆಗೆ ಕರಾಟೆ ಕಲಿಯುವುದು ಅಗತ್ಯ ಎಂದು ಇಸ್ಕಾ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಉಡಚಪ್ಪ ಮಾಳಗಿ ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕರಾಟೆ ಕ್ರೀಡಾಪಟುಗಳ ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಕರಾಟೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಪರಶುರಾಮ ಅಗಡಿ, ಕರಾಟೆ ಮುಖ್ಯ ತರಬೇತುದಾರ ರಮೇಶ ಡಿ.ಜಿ. ಮಾತನಾಡಿದರು. ಅಂತಾರಾಷ್ಟ್ರೀಯ ಶೋಟೋಕಾನ್ ಕರಾಟೆ ಮುಖ್ಯಸ್ಥ ಶೇನ್ಷಾಯಿ ಜಾರ್ಜ್, ಮಂಜುನಾಥ ದೊಡ್ಡಮನಿ, ರಾಕೇಶ ದೊಡ್ಡಮನಿ, ನಾಗರಾಜ ಪೂಜಾರ, ವಿಕಾಸ ಹಡಪದ, ಸಮೃದ್ಧಿ ಅಂಗಡಿ, ಗೌತಮ್ ಸೋಮಾನಿ, ರಜತ್ ಸೋಮಾನಿ, ಸಾಕ್ಷಿ ಕೆಳಗಿನಮನಿ, ಆಯುಷ ಗೌಡರ, ಏಕಾಂತ ಹಾವೇರಿ, ಪ್ರವೀಣ ಹಿರೇಮಠ, ಸುದೀಪ್ ಉಪ್ಪಾರ ಸೇರಿದಂತೆ ಅನೇಕ ಕರಾಟೆ ಕ್ರೀಡಾಪಟುಗಳು ಭಾಗವಹಿಸಿದ್ದರು.