ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮುಸ್ಲಿಂ ಅನಾಥಗೆ ಸವಣೂರಲ್ಲಿ ಹಿರೇಮಠ ಕುಟುಂಬದಿಂದ ವಿವಾಹ

Vishwanath S
Updated On : 24 Jun 2014, 11:25 am

ಸವಣೂರು: ಮುಸ್ಲಿಂ ಸಮುದಾಯದ ಅನಾಥನೊಬ್ಬನಿಗೆ ಆಶ್ರಯ ನೀಡಿದ್ದ ಹಿಂದೂ ಧರ್ಮದ ಹಿರೇಮಠ ಕುಟುಂಬವೊಂದು ಆತನ ಧರ್ಮದ ವಧುವಿನೊಂದಿಗೇ ಶಾದಿ ನೆರವೇರಿಸಿಕೊಟ್ಟಿದೆ!
ಸವಣೂರು ನಗರದ ದಂಡಿನಪೇಟೆ ನಿವಾಸಿ ಕುಮಾರಸ್ವಾಮಿ ಹಿರೇಮಠ ಅವರು ಮೆಹಬೂಬ್ ಹಿರೇಹಾಳ ಎಂಬ ಅನಾಥನಿಗೆ ಆರು ವರ್ಷ ಆಶ್ರಯ ನೀಡಿದ್ದರು. ಹಿರೇಮಠ ಕುಟುಂಬದವರು ಮನೆ ಸದಸ್ಯನಂತೆ ಬೆಳೆಸಿದ್ದ ಮೆಹಬೂಬ್‌ಗೆ ಶಿಗ್ಗಾಂವಿ ಪಟ್ಟಣದ ಮುಸ್ಲಿಂ ಸಮುದಾಯದ ಅಬ್ದುಲ್ ರಹಿಮಾನ ಗೌಸುಮಿಯಾ ಚುಡಿಗಾರ ಅವರ ಮಗಳೊಂದಿಗೆ ಲಗ್ನ ನಿಶ್ಚಯ ಮಾಡಿದ್ದರು.
ಅಂತೆಯೇ ಮೆಹಬೂಬ್‌ನ ವಿವಾಹವನ್ನು ಮೊಬಿನಾ ಜತೆಗೆ ಜೂ. 21ರಂದು ನೆರವೇರಿಸಿದರು. ಭಾನುವಾರ (ಜೂ. 22) ಅವರಿಬ್ಬರ ವಲಿಮಾ (ಆರತಕ್ಷತೆ) ಅದ್ಧೂರಿಯಾಗಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement