ಸೌಲಭ್ಯಗಳನ್ನು ಪಡೆಯಲು ಹಿಂಜರಿಯಬೇಡಿ : ಬಂಗಾರಮ್ಮ
ಹಾನಗಲ್ಲ: ಸಂಘಗಳ ಪ್ರತಿನಿಧಿಗಳು ತಮ್ಮ ಬೇಡಿಕೆಗಳಿಗಾಗಿ ಗ್ರಾಪಂಗಳಿಗೆ ಲಿಖಿತ ಪತ್ರ ಕೊಟ್ಟು ಒತ್ತಾಯಿಸಬೇಕು. ಮಹಿಳೆಯರಿಗೆ ಸಿಗುವ ಸೌಲಭ್ಯ ಪಡೆಯುವಲ್ಲಿ ಹಿಂಜರಿಯುವ ಅಗತ್ಯವಿಲ್ಲ ಎಂದು ಹೊಂಕಣ ಗ್ರಾಮಸಭಾ ಸಂಘದ ಪ್ರತಿನಿಧಿ ಬಂಗಾರಮ್ಮ ಅಂಬಿಗೇರ ಹೇಳಿದರು.
ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಗ್ರಾಮಸಭಾ ಸಂಘಗಳ ಪ್ರತಿನಿಧಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಪಂಗಳಿಂದ ಪ್ರತಿಯೊಂದು ಮನೆಗಳಿಗೆ ಶೌಚಾಲಯ ಕಟ್ಟಿಕೊಳ್ಳಲು ಸಿಗುವ ಅನುದಾನ ಪಡೆದುಕೊಳ್ಳಬೇಕು. ಎಲ್ಲ ಮನೆಗಳು ಶೌಚಾಲಯ ಹೊಂದಿರಬೇಕು ಎಂದು ಸಲಹೆ ಮಾಡಿದರು.
ರೋಶನಿ ಸಂಸ್ಥೆಯ ನಿರ್ದೇಶಕಿ, ಸಿಸ್ಟರ್ ಡಿಂಪಲ್ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸಭಾ ಸಂಘದ ಪ್ರತಿನಿಧಿಗಳಾದ ಹೇಮಾವತಿ ಕುನ್ನೂರು, ರೇಖಾ ಪಾಟೀಲ ಮಾತನಾಡಿದರು. ನಿರ್ಮಲಾ ಸ್ವಾಗತಿಸಿದರು, ಗೌರಮ್ಮ ನಿರೂಪಿಸಿದರು. ಕೆ.ಎಫ್. ನಾಯ್ಕರ ವಂದಿಸಿದರು.