ಜೋಯಿಡಾ: ಲೋಕಾಯುಕ್ತ ಎಸ್ಪಿ ಭೇಟಿ
ಜೋಯಿಡಾ: ತಾಲೂಕಿಗೆ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ಬಿ.ಎಸ್. ಸಿದ್ದೇಗೌಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಕುಂದುಕೊರತೆ ಆಲಿಸಿದರು. ವಸತಿ ನಿಲಯದ ಗೋಡೆ ಸರಿಪಡಿಸಲು ಹಾಗೂ ಸೂಕ್ತ ಮೂಲ ವ್ಯವಸ್ಥೆ ಕಲ್ಪಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆಸಿ ಸಾರ್ವಜನಿಕರ ಕಾರ್ಯಗಳು ವಿಳಂಬವಾಗುತ್ತಿದ್ದು, ಕೆಲಸ ಕಾರ್ಯಗಳು ತ್ವರಿತವಾಗಿ ಮಾಡಿಕೊಡುವಂತೆ ಸೂಚಿಸಿದರು. ಲೋಕಾಯುಕ್ತ ಡಿಎಸ್ಪಿ ನಾಗೇಶ ಶೆಟ್ಟಿ, ಸಿಪಿಐ ಜಾಯ್ ಅಂತೋನಿ, ಸಿಬ್ಬಂದಿ ಉಪಸ್ಥಿತರಿದ್ದರು.