ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪುರಾತನ ದೇವಸ್ಥಾನ ರಕ್ಷಣೆ ಸರ್ವರ ಕರ್ತವ್ಯ

Mainashree
Updated On : 4 Mar 2014, 10:03 am

ಹಾನಗಲ್ಲ:  ಐತಿಹಾಸಿಕ ಸ್ಮಾರಕಗಳಾದ ಪುರಾತನ ದೇವಸ್ಥಾನಗಳನ್ನು ಉಳಿಸಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಸರ್ಕಾರ ಹಾಗೂ ಪುರಾತತ್ವ ಇಲಾಖೆ ಇದಕ್ಕೆ ಸಹಕರಿಸುತ್ತವೆ. ಅವುಗಳ ಅನುದಾನ, ಮಾರ್ಗದರ್ಶನ ಪಡೆದು ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಗ್ರಾಮಸ್ಥರು ಮುಂದಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ ಹೇಳಿದರು.  
ತಾಲೂಕಿನ ಕೊಪ್ಪರಸಿಕೊಪ್ಪ ಹಾಗೂ ಆರೇಗೊಪ್ಪ ಗ್ರಾಮಗಳಿಗೆ ಒಂದೂವರೆ ಕಿಮೀ ದೂರದ ಚಿಕ್ಕಣಗಿ ಗ್ರಾಮದಲ್ಲಿರುವ ಪುರಾತನ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಸಮಿತಿ ನಿರ್ಮಿಸಿದ ಬನ್ನಿಕಟ್ಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರದಿಂದ ದೂರದಲ್ಲಿರುವ ಹಳೆಯ ಗ್ರಾಮವಾದ ಚಿಕ್ಕಣಗಿ ಗ್ರಾಮವನ್ನು ಮತ್ತೆ ಕಟ್ಟ ಬೇಕಾಗಿದೆ. ಇದಕ್ಕೆ ಸುತ್ತಲಿನ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.
ಮರಾಠಾ ಸಮಾಜದ ತಾಲೂಕು ಅಧ್ಯಕ್ಷ ವಿಷ್ಣುಕಾಂತ ಜಾಧವ ಮುಖ್ಯ ಅತಿಥಿಯಾಗಿ ಮಾತನಾಡಿ, ಸರ್ಕಾರ ನೀಡುತ್ತಿರುವ ಆಶ್ರಯ ಮನೆಗಳನ್ನು ಈ ದೇವಸ್ಥಾನದ ಜಾಗೆಯ ಸುತ್ತಲಲ್ಲಿ ನೀಡುವಂತೆ ಸರ್ಕಾರಕ್ಕೆ ಶಾಸಕರ ಮೂಲಕ ಪ್ರಸ್ತಾವನೆ ಕಳಿಸುವುದು ಸೂಕ್ತ, ಈ ಜಾಗೆಯಲ್ಲಿ ನೂತನ ಗ್ರಾಮ ನಿರ್ಮಾಣವಾದರೆ ದೇವಸ್ಥಾನವೂ ರಕ್ಷಣೆಯಾಗುತ್ತದೆ. ಆ ನಿಟ್ಟಿನಲ್ಲಿ ಆರೇಗೊಪ್ಪ, ಚಿಕ್ಕಣಗಿ ಗ್ರಾಮಸ್ಥರ ಸಹಾಯ, ಸಹಕಾರ, ಆಸಕ್ತಿ ಅತ್ಯವಶ್ಯ ಎಂದು ಹೇಳಿದರು.
ಸಮಾರಂಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಆನಂದಪ್ಪ ಜಾಧವ, ಕಾರ್ಯದರ್ಶಿ ಶಿವಾನಂದ ಚಂದ್ರಗಿರಿ, ನಾರಾಯಣ ಪವಾರ, ಗ್ರಾ.ಪಂ. ಅಧ್ಯಕ್ಷೆ ರತ್ನವ್ವ ಆಡೂರ, ಪೀರಸಾಬ ಆಲದಕಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಾಜಿ ಸಾಳುಂಕೆ, ವಿಷ್ಣು ಪವಾರ, ರಘು ಗಾಯಕವಾಡ, ಗೋವಿಂದಪ್ಪ ಸವಣೂರ, ಸುರೇಶ ಮಟ್ಟಿಮನಿ, ಹಾಶಂಪೀರ ಇನಾಂದಾರ ಹಾಗೂ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement