ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರು. 4 ಕೋಟಿಯಲ್ಲಿ ಹಳ್ಳಿ ರಸ್ತೆ ಅಭಿವೃದ್ಧಿ

Mainashree
Updated On : 4 Mar 2014, 10:03 am

ರಾಣಿಬೆನ್ನೂರು: ತುಂಗಾ ಮೇಲ್ದಂಡೆ ಯೋಜನೆಯ ರಾಣಿಬೆನ್ನೂರು ಉಪ ವಿಭಾಗ ನಂ.1 ಹಾಗೂ 2ರ ವ್ಯಾಪ್ತಿಗೊಳಪಟ್ಟಿರುವ ತಾಲೂಕಿನ 37 ಗ್ರಾಮಗಳಲ್ಲಿ 7 ಕೋಟಿ 90 ಲಕ್ಷ 56 ಸಾವಿರ ರು. ಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿಗಳನ್ನು ಹಾಗೂ ಲೋಕೋಪಯೋಗಿ ಇಲಾಖೆಯಿಂದ ರು. 16 ಕೋಟಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರು. 4 ಕೋಟಿಗಳಲ್ಲಿ ಗ್ರಾಮಾಂತರ ಪ್ರದೇಶದ ರಸ್ತೆಗಳನ್ನೆಲ್ಲಾ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದೆಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ತುಂಗಾ ಮೇಲ್ದಂಡೆ ಯೋಜನೆ ಉಪ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗಂಗಾಪುರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ರು. 19.20 ಲಕ್ಷಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ, ಹರನಗಿರಿ ರು. 20 ಲಕ್ಷಗಳಲ್ಲಿ, ಚಿಕ್ಕಅರಳಿಹಳ್ಳಿ ಗ್ರಾಮದಲ್ಲಿ ರು. 25 ಲಕ್ಷ, ಚಂದಾಪುರ ಗ್ರಾಮದಲ್ಲಿ ರು. 19.25 ಲಕ್ಷಗಳಲ್ಲಿ, ಚೌಡಯ್ಯದಾನಪುರ ಗ್ರಾಮದಲ್ಲಿ ರು. 19.70 ಲಕ್ಷಗಳಲ್ಲಿ, ನೂಕಾಪು ಗ್ರಾಮದಲ್ಲಿ ರು. 25.35 ಲಕ್ಷಗಳಲ್ಲಿ, ಹೊನ್ನತ್ತಿ ತಾಂಡಾದಲ್ಲಿ ರು. 19.80 ಲಕ್ಷಗಳಲ್ಲಿ, ಹೊನ್ನತ್ತಿ ಗ್ರಾಮದಲ್ಲಿ ರು. 21.90 ಲಕ್ಷ, ಚನ್ನಾಪುರ ತಾಂಡಾದಲ್ಲಿ ರು. 23.55 ಲಕ್ಷ, ಗುಡಗೂರು ತಾಂಡಾದಲ್ಲಿ ರು. 20.80 ಲಕ್ಷ, ಮೈದೂರು ಗ್ರಾಮದಲ್ಲಿ ರು. 21 ಲಕ್ಷ, ಬೇಲೂರು ಗ್ರಾಮದಲ್ಲಿ ರು. 20 ಲಕ್ಷ, ಉದಗಟ್ಟಿ ಗ್ರಾಮದಲ್ಲಿ ರು. 20 ಲಕ್ಷ, ಮೇಡ್ಲೆರಿ ಗ್ರಾಮದಲ್ಲಿ ರು. 18.20 ಲಕ್ಷ, ರಾಹುತನಕಟ್ಟಿ ಗ್ರಾಮದಲ್ಲಿ ರು. 20 ಲಕ್ಷ, ಆರೇಮಲ್ಲಾಪುರ ಗ್ರಾಮದ ಶಿವಾಜಿ ನಗರದಲ್ಲಿ ರು. 42 ಲಕ್ಷ, ಕೋಣನತಂಬಗಿ ಗ್ರಾಮದಲ್ಲಿ ರು. 21.65 ಲಕ್ಷ, ಐರಣಿ ಲಂಬಾಣಿ ತಾಂಡಾದಲ್ಲಿ ರು. 16.30 ಲಕ್ಷ, ಖಂಡೆರಾಯನಹಳ್ಳಿ ತಾಂಡಾದಲ್ಲಿ ರು. 19.55 ಲಕ್ಷ, ಹೂಲಿಕಟ್ಟಿ ಗ್ರಾಮದಲ್ಲಿ 19.90 ಲಕ್ಷ, ಕವಲೆತ್ತು ಗ್ರಾಮದ ಇಂದಿರಾ ಕಾಲೋನಿಯಲ್ಲಿ ರು. 15.21 ಲಕ್ಷ, ನಾಗೇನಹಳ್ಳಿ ಗ್ರಾಮದಲ್ಲಿ 18.90 ಲಕ್ಷ, ದೇವಗೊಂಡನಕಟ್ಟಿ ಗ್ರಾಮದಲ್ಲಿ ರು. 21.14 ಲಕ್ಷ, ಹುಣಶಿಕಟ್ಟಿ ತಾಂಡಾದಲ್ಲಿ ರು. 26.75 ಲಕ್ಷ, ಮಣಕೂರು ಗ್ರಾಮದಲ್ಲಿ ರು. 23.65 ಲಕ್ಷ, ಆಲದಕಟ್ಟಿ ರು. 20.34 ಲಕ್ಷ, ಹಾರೊಗೋಪ್ಪ ರು. 20 ಲಕ್ಷ,ಬಿಲ್ಲಹಳ್ಳಿ ರು. 20 ಲಕ್ಷ, ದಂಡಗಿಹಳ್ಳಿ ರು. 20 ಲಕ್ಷ, ಕುಪ್ಪೇಲೂರು ರು. 26.90 ಲಕ್ಷ, ಹಿರೇಮಾಗನೂರು ರು. 15 ಲಕ್ಷ, ಚಿಕ್ಕಮಾಗನೂರು ರು. 18.90 ಲಕ್ಷ, ಮಾಳನಾಯಕನಹಳ್ಳಿ ರು. 22.15 ಲಕ್ಷ, ಮೆಣಶಿನಹಾಳ ರು. 30 ಲಕ್ಷ, ಕುಸಗೂರು 16.21 ಲಕ್ಷ, ಹಲಗೇರಿ ಗ್ರಾಮದ ಜನತಾ ಪ್ಲಾಟ್ ನಲ್ಲಿ ರು. 22.31 ಲಕ್ಷ, ಬಸಲಿಕಟ್ಟಿ ತಾಂಡಾದಲ್ಲಿ ರು. 20 ಲಕ್ಷ ಸೇರಿದಂತೆ ಒಟ್ಟು ತಾಲೂಕಿನ 37 ಗ್ರಾಮಗಳಲ್ಲಿ ರು. 7 ಕೋಟಿ 90 ಲಕ್ಷ 56 ಸಾವಿರಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಹಾಗೂ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಿಸಲಾಗುವುದೆಂದರು.
ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ಹರನಗಿರಿ ಗ್ರಾಮದಿಂದ ದೇವರಗುಡ್ಡದ ಸಮೀಪದಲ್ಲಿ ಹಾದು ಹೋಗಿರುವ ಬಾಗಲಕೋಟೆ ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ಕೂಡುವ ರಸ್ತೆಯನ್ನು ರು. 1 ಕೋಟಿ ಗಳಲ್ಲಿ, ದೇವರಗುಡ್ಡ ಕ್ರಾಸ್‌ನಿಂದ ಯಲ್ಲಾಪುರ ಗ್ರಾಮದವರೆಗಿನ 2.10 ಕಿ.ಮೀ. ರಸ್ತೆಯನ್ನು ರು. 50 ಲಕ್ಷಗಳಲ್ಲಿ ಹಾಗೂ ರಾಣಿಬೆನ್ನೂರು ನಗರದಿಂದ ಮುದೇನೂರು ವರೆಗಿನ ಮತ್ತು ಮುದೇನೂರಿನಿಂದ ಐರಣಿವರೆಗಿನ ರಸ್ತೆ ಸೇರಿದಂತೆ ರಾಹುತನಕಟ್ಟಿ, ಮೇಡ್ಲೇರಿ ಗ್ರಾಮಗಳ ರಸ್ತೆಗಳನ್ನು ರು. 7.90 ಲಕ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದೆಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.    
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹೂವಕ್ಕ ನಾಗೂರು, ಎಪಿಎಂಸಿ ಅಧ್ಯಕ್ಷರಾದ ನಂದೆಪ್ಪ ತೆಗ್ಗಿನ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಅಂಬಲಿ, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ಗುಡಗೂರು ಗ್ರಾಪಂ ಮಾಜಿ ಅಧ್ಯಕ್ಷ ಸೋಮಣ್ಣ ಚಿಕ್ಕಳ್ಳೇರ, ಗೋವಿಂದಪ್ಪ ಕುಪ್ಪೆಲೂರು, ತಾಪಂ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ ರಾಯರೆಡ್ಡಿ, ನಗರಸಭಾ ಅಧ್ಯಕ್ಷ ಶಿವಪ್ಪ ಮಣೇಗಾರ, ಸದಸ್ಯರಾದ ಬಸವರಾಜ ಹುಚ್ಚಗೊಂಡರ ಹಾಗೂ ಲೋಕೋಪಯೋಗಿ ಮತ್ತು ತುಂಗಾ ಮೇಲ್ದಂಡೆ ಯೋಜನೆಯ ಅಭಿಯಂತರು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement