ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೋಗ ರಹಿತ ಸಮಾಜ ನಿರ್ಮಿಸಲು ಸಂಗೀತಾ ಕರೆ

Mainashree
Updated On : 4 Mar 2014, 10:03 am

ರಾಣಿಬೆನ್ನೂರು:  ಸುಮಾರು 47 ಸಾವಿರ ಮಹಿಳಾ ಪ್ರಧಾನ ಕುಟುಂಬಗಳನ್ನು ಹೊಂದಿರುವ ಹಾವೇರಿ ಜಿಲ್ಲೆಯಲ್ಲಿ ಶೇ.54ರಷ್ಟು ಕುಟುಂಬಗಳು ಮಾತ್ರ ಸ್ವಾಭಿಮಾನದ ಸಂಕೇತವಾಗಿರುವ ಶೌಚಾಲಯವನ್ನು ಹೊಂದಿರುವುದು ವಿಷಾದನೀಯವೆಂದು ಬಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೆಟ್ ಸದಸ್ಯೆ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ಹೇಳಿದರು.
ನಿಶಾರ್ಡ ಸಂಸ್ಧೆ, ನವಜ್ಯೋತಿ ಸ್ವಸಹಾಯ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಣಿಬೆನ್ನೂರು, ಗ್ರಾಪಂ ಮುದೇನೂರು ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಧೆಗಳ ಆಶ್ರಯದಲ್ಲಿ ತಾಲೂಕಿನ ಮುದೇನೂರು ಗ್ರಾಮದ ಮೂಡಣ ಆಂಜನೇಯ ದೇವಸ್ಧಾನದ ಆವರಣದಲ್ಲಿ ಏರ್ಪಡಿಸಿದ್ದ ಸ್ವಸ್ಥ ಮಹಿಳೆ ಸಶಕ್ತ ಭಾರತ ಎಂಬ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಅವರು ಮಾತನಾಡಿ, ಸ್ವಾಭಿಮಾನದ ಸಂಕೇತವಾಗಿರುವ ಶೌಚಾಲಯವನ್ನು ಮನೆಗೊಂದು ನಿರ್ಮಿಸಿಕೊಂಡು ಬಳಸಿದಲ್ಲಿ ಮಾತ್ರ ದೇಶದ ಗ್ರಾಮಾಂತರ ಪ್ರದೇಶದ ಮಹಿಳೆಯರು ಹಲವಾರು ರೋಗ ರುಜಿನಗಳಿಂದ ಮುಕ್ತರಾಗಿರಲು ಸಾಧ್ಯವೆಂದು ಅನೇಕ ಸಂಶೋಧನೆಗಳಿಂದ ಕಂಡು ಬಂದಿದೆ.
ಡಾ. ಜಾಗೃತಿ ದೇಶಮಾನೆ ಮಾತನಾಡಿ, ಶಿಕ್ಷಣ ಸ್ವಚ್ಛತೆ ಶೌಚಾಲಯ ಬಳಕೆ ಆಹಾರ ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಗಂಡೊಬ್ಬ ಕುಡಿತ ಕಲಿತರೆ ಸಂಸಾರವೆಲ್ಲಾ ಸುಡುಗಾಡು ಸೇರಿದಂತೆ ಎಂದು ಹೇಳುವುದರೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸದಸ್ಯ ಸಂತೋಷ ಪಾಟೀಲ ಮಾತನಾಡಿ, ಎಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಗೌರವ ಸಿಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂದು ಹಿರಿಯರು ಹೇಳಿದ್ದು ಮಹಿಳೆಯರಾದ ತಾಯಂದಿರು ತಮ್ಮ ಮಕ್ಕಳನ್ನು ಸಾಕ್ಷರರನ್ನಾಗಿಸಬೇಕೆಂದು ತಿಳಿಸಿದರು.
ನಿಶಾರ್ಡ್ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿ ಸಾಹುಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಗೀತಾ ಗುತ್ತೆಪ್ಪ ತಳವಾರ, ತಾಪಂ ಮಾಜಿ ಅಧ್ಯಕ್ಷೆ ರೇಣುಕಾ ಮಲಕನಹಳ್ಳಿ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಐ. ಗಂಗನಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ವೀರನಗೌಡ ಪಾಟೀಲ, ವಿ.ಆರ್. ಲಿಂಗನಗೌಡ್ರ, ಗ್ರಾಪಂ ಕಾರ್ಯದರ್ಶಿ ಗಣೇಶ ಬಾನಿ, ಗ್ರಾಪಂ ಮಾಜಿ ಅಧ್ಯಕ್ಷ ಫಕ್ಕಿರಪ್ಪ ಪೂಜಾರ, ಶಿಕ್ಷಕ ಎ.ಎಚ್. ದೇವರಮನಿ, ಆರ್.ವಿ.ಧಾರವಾಡ, ಎನ್.ಪಿ. ಪಾಟೀಲ, ಮಹೇಶ ಬಾರ್ಕಿ, ಬಿ.ಬಿ. ಬಣಕಾರ, ಎಸ್.ಎಂ. ಸುತ್ತಕೋಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement