ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದಿನಿಂದ ನಿಸ್ಸೀಮೇಶ್ವರ ಜಾತ್ರೆ

Mainashree
Updated On : 6 Mar 2014, 10:59 am

ಹಾನಗಲ್ಲ: ಾಲೂಕಿನ ಸುಕ್ಷೇತ್ರ ನಿಸ್ಸೀಮ ಆಲದಕಟ್ಟಿಯ ನಿಸ್ಸೀಮೇಶ್ವರ ದೇವರ ಮಹಾರಥೋತ್ಸವದ ಅಂಗವಾಗಿ ಮಾ. 6 ರಿಂದ 17ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಮಾ. 6ರಂದು ಬೆಳಗ್ಗೆ 6 ಗಂಟೆಗೆ ನಿಸ್ಸೀಮೇಶ್ವರ ದೇವಸ್ಥಾನದ ಆವರಣದಲ್ಲಿ ನಂದಿ ಧ್ವಜಾರೋಹಣ, ನಂತರ ನಿಸ್ಸೀಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಸಂಜೆ 4 ಗಂಟೆಗೆ ಮಹಾರಥೋತ್ಸವದ ಕಳಸಾರೋಹಣ ಜರುಗುವುದು. ರಾತ್ರಿ 8 ಗಂಟೆಗೆ ಹೋತನಹಳ್ಳಿ ಸಿಂದಗೀಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶರಣಬಸವೇಶ್ವರ ಮಹಾಪುರಾಣ ಉದ್ಘಾಟನೆಗೊಂಡು ಮಾ. 16ರ ವರೆಗೆ ನಡೆಯಲಿದೆ. ಮಾ. 9ರಂದು ಮಧ್ಯಾಹ್ನ 12 ಗಂಟೆಗೆ ಹೂವಿನ ರಥೋತ್ಸವ ಹಾಗೂ ಮಹಾಗಣಾರಾಧನೆ ಜರುಗುವುದು. 14ರಂದು ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು. ಮಾ. 14ರಿಂದ 16ರ ವರೆಗೆ ಮಧ್ಯಾಹ್ನ 3 ಗಂಟೆಗೆ ಜಂಗೀ ಬಯಲು ಕುಸ್ತಿಗಳು ನಡೆಯುವವು. ಮಾ. 17ರಂದು ಸಂಜೆ 4 ಗಂಟೆಗೆ ನಿಸ್ಸೀಮೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ದೊಡ್ಡಾಟ ಪ್ರದರ್ಶನ
ಶಿಗ್ಗಾಂವಿ: ನಗರದ ಶ್ರೀ ವಿರಕ್ತಮಠದಲ್ಲಿ ಲಿಂ. ಸಂಗನಬಸವ ಸ್ವಾಮಿಗಳವರ ಪುಣ್ಯಾರಾಧನೆ ನಿಮಿತ್ತ ಮಾ. 6ರಂದು ರಾತ್ರಿ 8 ಗಂಟೆಗೆ ಇಂಗಳಗಿ ಗ್ರಾಮದ ಗ್ರಾಮ ರಂಗ ಸಾಂಸ್ಕೃತಿಕ ವೇದಿಕೆ ವತಿಯಿಂದ ವೀರರಾಣಿ ಕಿತ್ತೂರ ಚನ್ನಮ್ಮ ಎಂಬ ಮೂಡಲಪಾಯ ದೊಡ್ಡಾಟ ಪ್ರದರ್ಶನವಾಗಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಂಗನಬಸವ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಅಂಬಳಿಕೆ ಹಿರಿಯಣ್ಣ ವಹಿಸುವರು. ಜನಪದ ಕಲಾವಿದರಾದ ವೀರೇಶ ಬಡಿಗೇರ, ಬಸವರಾಜ ಶಿಗ್ಗಾಂವಿ ಉಪಸ್ಥಿತರಿರುವರು ಎಂದು ಮಠದ ಪ್ರಕಟಣೆ ಕೋರಿದೆ.
ಇಂದು ರಥೋತ್ಸವ
ಹಿರೇಕೆರೂರು: ಹಿರೇಕೆರೂರು ತಾಲೂಕಿನ ಹಿರೇಮಾದಾಪುರ ಗ್ರಾಮದಲ್ಲಿ ಶ್ರೀ ಮಾರುತಿ ದೇವರ ರಥೋತ್ಸವ ಹಾಗೂ ಗುಗ್ಗಳ ಮಾ. 6ರಂದು ಜರುಗಲಿದೆ. ಕಾರ್ಯಕ್ರಮ ನಿಮಿತ್ತವಾಗಿ ಮಾ. 7ರಂದು ರಾತ್ರಿ 8.30ಕ್ಕೆ ಹಿರೇಕೆರೂರು ತಾಲೂಕಿನ ಹೊಸಳ್ಳಿ ಗ್ರಾಮದ ಶ್ರೀ ಶನೇಶ್ವರ ನಾಟಕ ಸಂಘದ ಕಲಾವಿದರಿಂದ ಶ್ರೀ ಶನಿ ಪ್ರಭಾವ ಅರ್ಥಾತ್ ರಾಜಾ ವಿಕ್ರಮ ಎಂಬ ಭಕ್ತಿ ಪ್ರಧಾನ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು, ಸಾರ್ವಜನಿಕರು ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement