ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಹಕಾರಿ ಕ್ಷೇತ್ರ ಪವಿತ್ರ: ಬಣಕಾರ

Mainashree
Updated On : 6 Mar 2014, 10:58 am

ಹಿರೇಕೆರೂರು: ಸಹಕಾರಿ ಕ್ಷೇತ್ರ ಪವಿತ್ರ ಕ್ಷೇತ್ರವಾಗಿದ್ದು, ಸರ್ವರೂ ಪರಸ್ಪರ ಸಹಕಾರದ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ವಿನಾಕಾರಣ ಹಸ್ತಕ್ಷೇಪ ಮಾಡಬಾರದು ತನ್ಮೂಲಕ ಈ ಕ್ಷೇತ್ರಕ್ಕೆ ಹೆಚ್ಚಿನ ಸಹಕಾರವನ್ನು ಸರ್ಕಾರವು ಹೆಚ್ಚಿನ ಸಹಾಯ ಹಸ್ತ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ  ತಿಳಿಸಿದರು.
ಅವರು ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನವಾಗಿ ನಿರ್ಮಿಸಿದ ಸಹಕಾರಿ ರತ್ನ ಬಿ.ಜಿ. ಬಣಕಾರ ಸಹಕಾರಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಸಹಕಾರಿ ಕ್ಷೇತ್ರದಲ್ಲಿರುವ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡುತ್ತದೆ. ಆದರೆ ಆ ಹಣವನ್ನು ಬ್ಯಾಂಕುಗಳಿಗೆ ತಕ್ಷಣ ಪೂರೈಸದೆ ಬ್ಯಾಂಕುಗಳ ಆಡಳಿತಕ್ಕೆ ಹಿನ್ನಡೆಯಾಗುತ್ತದೆ. ಇದರಿಂದಾಗಿ ಸಹಕಾರಿ ಕ್ಷೇತ್ರ ಇದ್ದೂ ಇಲ್ಲದಂತಾಗುತ್ತದೆ. ಈ ಕ್ಷೇತ್ರವು ಪರಿಣಾಮಕಾರಿಯಾಗಿ ಯಶಸ್ವಿಯಾಗಲು ಸಹಕಾರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಆಡಳಿತ ಮಂಡಳಿ ಮತ್ತು ನೌಕರರು ಹೆಚ್ಚಿನ ದಕ್ಷತೆ, ಪ್ರಮಾಣಿಕತೆ ಹಾಗೂ ತ್ಯಾಗ ಮನೋಭಾವನೆಯಿಂದ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದಾಗ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಪಿಎಲ್‌ಡಿ ಬ್ಯಾಂಕಿನ ನೂತನ ಆಡಳಿತ ಮಂಡಳಿಯ ಯುವಕರು ಉತ್ತಮ ಸಾಧನೆ ಮಾಡಿದ್ದಾರೆ ಎಂದು  ಬ್ಯಾಂಕಿನ ಕಾರ್ಯ ಶ್ಲಾಘಿಸಿದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಇದಕ್ಕೆ ಸಹಕಾರಿ ಕ್ಷೇತ್ರದಲ್ಲಿರುವ ಬ್ಯಾಂಕುಗಳಿಗೆ ಹೆಚ್ಚಿನ ಸಹಾಯ ನೀಡಬೇಕು, ಇಲ್ಲಿ ವ್ಯಕ್ತಿ ಶಾಶ್ವತವಲ್ಲ, ಸಹಕಾರ ಮುಖ್ಯವಾಗಿದ್ದು ನಿಸ್ವಾರ್ಥ ಸೇವೆಗೆ ಅರ್ಪಿಸಿಕೊಂಡಾಗ ಮಾತ್ರ ಸಹಕಾರ ಕ್ಷೇತ್ರ ಹೆಮ್ಮರವಾಗುತ್ತದೆ. ಪಕ್ಷಾತೀತವಾಗಿ, ರೈತರ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ನುಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿದರು. ಬ್ಯಾಂಕಿನ ಮಾಜಿ ಅಧ್ಯಕ್ಷ ಮಲ್ಲನಗೌಡ ಪುಟ್ಟಪ್ಪಗೌಡ್ರ ಪ್ರಸ್ತಾವಿಕ ಮಾತನಾಡಿದರು. ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜಪ್ಪಗಿಡ್ಡಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ತಾಪಂ ಅಧ್ಯಕ್ಷೆ ರೇಣುಕಾ ಚಲುವಾದಿ, ಕಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ ಕುಲಕರ್ಣಿ, ಉಪಾಧ್ಯಕ್ಷ ಎಂ.ಆರ್. ಬುರುಡಿಕಟ್ಟಿ, ನಿರ್ದೇಶಕರಾದ ರವೀಂದ್ರ ಮುದಿಯಪ್ಪನವರ, ಎಂ.ವಿ. ಹೊಂಬರಡಿ, ಸಿ.ಯು. ಕವಲಿ, ಷಣ್ಮುಖಯ್ಯ ಮಳಿಮಠ, ವೀರನಗೌಡ ಬಿದರಿ, ಗೀತಾ ನಂದಿಹಳ್ಳಿ, ಧರ್ಮಣ್ಣ ಚಲುವಾದಿ, ಎಂ.ಎಚ್. ಪುಟ್ಟಪ್ಪಗೌಡ್ರ, ಸಹಕಾರಿ ಯೂನಿಯನ್ ನಿರ್ದೇಶಕ ಶಂಭಣ ವಡೆನಪುರ, ಪ್ರಭಾರ ವ್ಯವಸ್ಥಾಪಕಿ ಜಯಮ್ಮ ಕೋರಿ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement