ಸಂಸದರೊಂದಿಗೆ ಇಂದು ಸಂವಾದ
ಹಾವೇರಿ: ಜಿಲ್ಲಾ ಬಿಜೆಪಿ ಘಟಕ ಮಾ. 7ರಂದು ಬೆಳಗ್ಗೆ 11ಕ್ಕೆ ನಗರದ ದಾನೇಶ್ವರಿ ಕಲಾಭವನದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಮೇಲೆ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಸಂಸದರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ.
ಈ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಆಸಕ್ತ ಪದವಿ ಪೂರ್ವ ನಂತರದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾಧ್ಯಕ್ಷ ಭೋಜರಾದ ಕರೂದಿ ಉದ್ಘಾಟಿಸಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ವಹಿಸಲಿದ್ದಾರೆ ಎಂದು ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರ್ಡೇಕರ ತಿಳಿಸಿದ್ದಾರೆ.
ನಾಳೆ ಪಂಚಮಸಾಲಿ ಸಂಘದ ಸಭೆ
ಬ್ಯಾಡಗಿ: ತಾಲೂಕು ವೀರಶೈವ ಪಂಚಮಸಾಲಿ ಸಂಘದ ಸದಸ್ಯರ ಸಭೆ ಕದರಮಂಡಲಗಿ ರಸ್ತೆಯಲ್ಲಿನ ಎಸ್.ಎಸ್. ಗಡಾದ ಅವರ ನಿವಾಸದಲ್ಲಿ ಮಾ. 8ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ತಾಲೂಕಾಧ್ಯಕ್ಷ ನಾಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧ್ಯಕ್ಷ ಎಸ್.ಆರ್. ಅಂಗಡಿ ಸೇರಿದಂತೆ ಇನ್ನಿತರ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜ ಬಾಂಧವರು ಸಭೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸುವಂತೆ ಶಂಕರಗೌಡ ಪಾಟೀಲ ಕೋರಿದ್ದಾರೆ.