ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದುರ್ಗಮ್ಮ, ಮರಿಯಮ್ಮ ಜಾತ್ರೆ

Rashmi Kasaragodu
Updated On : 8 Mar 2014, 12:25 pm

ಹಾನಗಲ್ಲ: ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಶುಕ್ರವಾರ ದುರ್ಗಮ್ಮ ದೇವಿ ಮತ್ತು ಮರಿಯಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, 19ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ. 11ರಂದು ಗ್ರಾಮದ ದೇವತೆಗಳಿಗೆ ಉಡಿ ತುಂಬುವುದು,  ರಾತ್ರಿ 9.15 ಗಂಟೆಗೆ ದುರ್ಗಮ್ಮದೇವಿ ಮತ್ತು ಮರಿಯಮ್ಮದೇವಿ ಮೂರ್ತಿಗಳ ಉತ್ಸವ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಪ್ರಮುಖ ಬೀದಿಗಳಲ್ಲಿ ನೆರವೇರಲಿದೆ. ಮಾ. 12ರಂದು ಪ್ರಾತಃಕಾಲ ದೇವಿಮೂರ್ತಿಗಳನ್ನು ಪಾದಗಟ್ಟೆಯಲ್ಲಿ ಗದ್ದುಗೆಗೊಳಿಸಲಾಗುವುದು. ಬಳಿಕ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ. ಮಾ. 13ರಂದು ರಾತ್ರಿ 9 ಗಂಟೆಗೆ ಶಿಗ್ಗಾಂವಿ ತಾಲೂಕಿನ ಕುನ್ನೂರಿನ ಜೈಕಿಸಾನ್ ಯುವ ಕಲಾ ತಂಡದ ಆಶ್ರಯದಲ್ಲಿ ಜಾನಪದ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಮಾ.14 ರಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಖಾಲಿ ಗಾಢಾ ಓಡಿಸುವ ಸ್ಪರ್ಧೆ, ಮಾ. 15ರಂದು ರಾತ್ರಿ 8 ಗಂಟೆಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಜಾನನ ಯುವಕ ಮಂಡಳದ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳಲಿದೆ. ಮಾ. 16ರಂದು ರಾತ್ರಿ 8 ಗಂಟೆಗೆ ಮಾಗಡಿಯ ರಾಘವೇಂದ್ರರಾವ್ ಕುಲಕರ್ಣಿ ಅವರಿಂದ ಹಾಸ್ಯದ ಹೊನಲು ಕಾರ್ಯಕ್ರಮ, ಮಾ. 17ರಂದು ರಾತ್ರಿ 9 ಗಂಟೆಗೆ ಜು. ಶಂಕರನಾಗ್ ಮತ್ತು ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ, ಮಾ. 18ರಂದು ರಾತ್ರಿ 8 ಗಂಟೆಗೆ ತಿಳವಳ್ಳಿಯ ನಾಗರಾಜ್ ಜೋಗಿ ಮತ್ತು ಸಂಗಡಿಗರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ. ಮಾ. 19ರಂದು ಮಧ್ಯಾಹ್ನ 3 ಗಂಟೆಗೆ ಹುಲುಸು ಕೊಡುವುದು, ಬಳಿಕ ದೇವಿಯರನ್ನು ಗಡಿಗೆ ಕಳುಹಿಸುವುದು ನಡೆದು ಜಾತ್ರಾ ಮಹೋತ್ಸವ ಸಮಾರೋಪಗೊಳ್ಳಲಿದೆ ಎಂದು ಸದ್ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.
ವಿಪ್ರ ಸಮಾಜದ ಸಭೆ ಇಂದು
ಹಾನಗಲ್ಲ: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀಶಂಕರಾಚಾರ್ಯ ಭಾರತೀತೀರ್ಥ ಸ್ವಾಮಿಗಳವರು ರಾಣಿಬೆನ್ನೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾನಗಲ್ಲ ತಾಲೂಕು ಘಟಕದ ಸಮಾಜ ಬಾಂಧವರ ಸಭೆಯನ್ನು ಮಾ. 8ರಂದು ಕರೆಯಲಾಗಿದೆ. ಶನಿವಾರ ಸಂಜೆ 4 ಗಂಟೆಗೆ ಪಟ್ಟಣದ ಶ್ರೀ ಶಂಕರಮಠದಲ್ಲಿ ಬ್ರಾಹ್ಮಣ ಸಮಾಜ ಬಾಂಧವರ ಸಭೆ ನಡೆಯಲಿದ್ದು, ಮಾ.13ರಂದು ಆಗಮಿಸುವ ಶ್ರೀಗಳ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲಾಗುವುದು. ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಘನಶ್ಯಾಮ ದೇಶಪಾಂಡೆ, ಮುತ್ತಣ್ಣ ನಾಶಿಕ ಮುಂತಾದವರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡುವರು ಮಹಾಸಭಾ ಕಾರ್ಯದರ್ಶಿ ವಿದ್ಯಾಶಂಕರ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಕ್ಕೂಟ ರಚನೆಗಾಗಿ ನಾಳೆ ಸಭೆ
ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರತ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ರಚಿಸಲು ಯೋಜಿಸಿದ್ದು, ಒಕ್ಕೂಟದ ಸಭೆಯನ್ನು ಮಾ. 9ರಂದು ಬೆಳಗ್ಗೆ 10 ಗಂಟೆಗೆ ನೀಡ್ಸ್ ಕಾರ್ಯಾಲಯ, ಸಂಗಮ್ ಟಾಕೀಜ್ ಹಿಂಭಾಗ ರಾಣಿಬೆನ್ನೂರಿನಲ್ಲಿ ಕರೆಯಲಾಗಿದೆ. ಆದ್ದರಿಂದ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಭಾಗವಹಿಸಲು ಕೋರಲಾಗಿದೆ. ಮೊ.ಸಂಖ್ಯೆ-9972363984, 9901712957, 9886518772 ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement