ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆಯಿಂದ ಸಿದ್ದೇಶ್ವರ ಜಾತ್ರೆ

Rashmi Kasaragodu
Updated On : 8 Mar 2014, 12:25 pm

ಹಿರೇಕೆರೂರು:  ತಾಲೂಕಿನ ಕಣವಿ ಶಿದ್ಗೇರಿ ಗ್ರಾಮದ ಸಿದ್ದೇಶ್ವರ ದೇವರ ಜಾತ್ರೆಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ. 9ರಿಂದ 12ರ ವರೆಗೆ ಜರುಗಲಿವೆ. ಈ ದೇವಸ್ಥಾನ ಬೆಟ್ಟದ ಮೇಲಿದ್ದು ಹಸಿರು ಬೆಟ್ಟಗಳ ಶ್ರೇಣಿಯಲ್ಲಿ ಐತಿಹಾಸಿಕ ಮಹತ್ವ ಪಡೆದಿದೆ.
 ಕ್ರಿಶ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನುವುದು ಇಲ್ಲಿನ ಶಿಲಾಶಾಸನದಿಂದ ತಿಳಿದು ಬರುತ್ತಿದೆ. ಎರಡು ಬೆಟ್ಟಗಳ ಮಧ್ಯೆ ದೇವಸ್ಥಾನ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಕಣವಿ  ಶಿದ್ದೇಶ್ವರ ಎನ್ನುತ್ತಾರೆ. ದುರ್ಗಾದೇವಿ, ಭಜನೆ ಬಾವಿ, ಪ್ರಾಂಗಣದಲ್ಲಿ ವಿಶೇಷವಾಗಿ ನಿರ್ಮಿಸಿದ ಶಿವನ ಮೂರ್ತಿ, ಅಂತರಗಂಗೆ ಹಾಗೂ ಭಗವತಿ ಕರೆಗಳು ಇಲ್ಲಿನ ವಿಶೇಷಗಳಾಗಿವೆ. ಮಾ. 9ರಂದು ಹೂವಿನ ತೇರು, ಮಾ. 10ರಂದು ಎಡೆ ಕೊಡುವುದು, ಮಾ. 11ರಂದು ದೊಡ್ಡ ರಥೋತ್ಸವ, ಗುಗ್ಗಳ, ಮತ್ತು ಅನ್ನಸಂತರ್ಪಣೆ, ಮಾ. 12ರಂದು ಓಕುಳಿ ಬುಕುಟ್ಟಿನ ಸೇವೆ, ಎತ್ತಿನ ಮೆರವಣಿಗೆ ನಡೆಯಲಿದೆ. ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ದೇವಸ್ಥಾನದ ಕಮಿಟಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement