ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರೊ. ಚನ್ನಪ್ಪ

Rashmi Kasaragodu
Updated On : 8 Mar 2014, 12:25 pm

ಹಾವೇರಿ: ಸತತ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತಮ್ಮ ತಮ್ಮ ಗುರಿ ಸಾಧಿಸಿಕೊಳ್ಳಬೇಕೆಂದು ಇಲ್ಲಿಯ ಕೆಎಲ್ಇ ಸಂಸ್ಥೆಯ ಸಿ. ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ. ಚನ್ನಪ್ಪ ತಿಳಿಸಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ 50ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಪ್ರತಿಯೊಬ್ಬರೂ ಶ್ರದ್ಧೆಯಿಂದ ಆಟಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಂದಾಗಬೇಕಿದೆ. ಮೊಬೈಲ್, ಇಂಟರ್ನೆಟ್ಗಳ ಅಬ್ಬರಕ್ಕೆ ಮಾರುಹೋಗಿರುವ ಇಂದಿನ ಯುವಜನತೆ ನಮ್ಮ ಮೂಲ ಕ್ರೀಡೆಗಳನ್ನು ಕಡೆಗಣಿಸುತ್ತಿದೆ. ಕೇವಲ ವಿಡಿಯೋಗೇವ್ ನಂತಹ ಇತರೇ ಅಂಶಗಳಿಂದಾಗಿ ಕ್ರೀಡಾ ಮನೋಭಾವ ಕಳೆಗುಂದುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಇಂದು ಮಾಯವಾಗಿರುವುದು ಶೋಚನೀಯ ಸಂಗತಿ. ಬೆಳೆಯುವ ಯುವಜನಾಂಗ ಪಾಠಗಳ ಜೊತೆಗೆ ಆಟಗಳತ್ತ ಮುಖಮಾಡಿ ಸಾಗಬೇಕಿದೆ. ಪರಿಪೂರ್ಣವಾದ ಆರೋಗ್ಯ ನಮ್ಮದಾಗಬೇಕಾದರೆ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗಿಗಳಾಗಿ, ಅವುಗಳಿಂದಾಗಿ ಆಗಬಹುದಾದ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ. 'ಆಡಿಕೆಟ್ಟ ಜನರಿಲ್ಲ, ಹೂಡಿ ಕೆಟ್ಟ ಜನರಿಲ್ಲ' ಎಂಬ ಗಾದೆಯಂತೆ ಎಲ್ಲರೂ ಇದರ ಸ್ಫೂರ್ತಿಯನ್ನು ಇಟ್ಟುಕೊಂಡು ಕ್ರೀಡಾ ಸಾಮರ್ಥ್ಯವನ್ನು ಮೆರೆಯಬೇಕಿದೆ ಎಂದು ಹೇಳಿದರು.  ಡಾ. ಸಿ. ಮಲ್ಲಣ್ಣ, ಡಾ. ಎಸ್.ಕೆ. ನಾಶಿ, ಡಾ. ವಿ.ಡಿ.ಯಳಮಲಿ ಇತರರು ಇದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಕೊಟ್ರೇಶ ಡಿ.ಎಸ್. ಸ್ವಾಗತಿಸಿದರು. ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ. ಡಿ. ಎ. ಕೊಲ್ಲಾಪುರೆ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement