ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾವೇರಿ: ನಾಯಿ ಭರಮ್ಯಾ ನಾಟಕ ಪ್ರದರ್ಶನ

Rashmi Kasaragodu
Updated On : 8 Mar 2014, 12:27 pm

ಹಾವೇರಿ: ತಾಲೂಕಿನ ಕಂಚಿನೆಗಳೂರ ಗ್ರಾಮದ ಚೆನ್ನಬಸವಜ್ಜನವರ ವಿದ್ಯಾರ್ಥಿ ಕಲಾತಂಡದ ನಾಯಿ ಭರಮ್ಯಾ ನಾಟಕ ಇಲ್ಲಿಯ ಜೆ.ಪಿ. ರೋಟರಿ ಪ್ರೌಢಶಾಲಾ ಸಭಾಂಗಣದಲ್ಲಿ ಪ್ರದರ್ಶನವಾಯಿತು.
ಗ್ರಾಮೀಣ ಮಕ್ಕಳು ಜಿಲ್ಲಾ ನಗರ ಕೇಂದ್ರ ಸ್ಥಳದಲ್ಲಿ ಪ್ರತಿಭೆ ತೋರಿಸಲು ಈ ಪ್ರದರ್ಶನವನ್ನು ರೋಟರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಏರ್ಪಡಿಸಿತ್ತು. ನಾಟಕಗಳು ಉತ್ತಮ ನಾಗರಿಕ ಸಮಾಜವನ್ನು ಕಟ್ಟಬಹುದೆಂದು ಸಂಸ್ಥೆ ಅಧ್ಯಕ್ಷ ಪ್ರಭಾಕರರಾವ್ ಮಂಗಳೂರು ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ತಮ್ಮ ಭಾವಪೂರ್ಣ ಅಭಿನಯದ ಮೂಲಕ ಒಂದು ಗಂಟೆ ಕಾಲ ನಾಯಿ ಭರಮ್ಯಾ ನಾಟಕ ಮಕ್ಕಳನ್ನು ರಂಜಿಸಿತು. ಕಲಾವಿದರಾದ ಪ್ರಕಾಶ ಗುಂಡೇನಹಳ್ಳಿ, ಸಂಗೀತಾ ಬೆಳವತ್ತಿ, ಬಸವರಾಜ ಜವಳಿ, ನಿವೇದಿತಾ ಗಿರಿಯಣ್ಣನವರ, ದಿವ್ಯಾ ಆಲದಕಟ್ಟಿ, ಚೈತ್ರಾ ಕಲ್ಲೇಗೌಡ್ರ, ಕಾವ್ಯಾ ಮಲಗುಂದ ಪಾಲ್ಗೊಂಡಿದ್ದರು. ನಾಟಕವನ್ನು ಶಿಕ್ಷಕ ಜಿ.ಎಂ. ಓಂಕಾರಣ್ಣನವರ ನಿರ್ದೇಶಿಸಿದ್ದರು. ನಾಟಕಕ್ಕೆ ಸಂಗೀತವನ್ನು ಷಣ್ಮುಖಯ್ಯಸ್ವಾಮಿ ಹಿರೇಮಠ ನೀಡಿದರು.
ರೋಟರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಬಿ. ಕೊಟೂರ, ಸದಸ್ಯ ಎಂ.ಆರ್. ಪಾಟೀಲ, ಮುಖ್ಯೋಪಾಧ್ಯಾಯ ಸಿ.ಎ. ದಳವಾಯಿ, ಕಂಚಿನೆಗಳೂರ ಗ್ರಾಮದ ಷಣ್ಮುಖಪ್ಪ ಗಿರಿಯಣ್ಣನವರ, ಶಿವಾನಂದಪ್ಪ ಆಲದಕಟ್ಟಿ ಹಾಗೂ ಸುರೇಶ ಟಾಕಪ್ಪನವರ ಇತರರು ಇದ್ದರು. ಎಲ್ಲ ನಾಟಕದ ಕಲಾವಿದರನ್ನು ಕಾರ್ಯದರ್ಶಿ ಎಂ.ಬಿ. ಕೊಟೂರ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement