ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರೀಕ್ಷಾ ಶುಲ್ಕ ಹೆಚ್ಚಿಸದಂತೆ ವಿದ್ಯಾರ್ಥಿಗಳ ಆಗ್ರಹ

Lingaraj Badiger
Updated On : 9 Mar 2014, 11:17 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 8
ಕಾಲೇಜು ವಿದ್ಯಾರ್ಥಿಗಳ ಬೋಧನಾ ಶುಲ್ಕ ಹಾಗೂ ಪರೀಕ್ಷಾ ಶುಲ್ಕದಲ್ಲಿ ಈ ಹಿಂದಿನಂತೆ ರಿಯಾಯತಿ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ರಿಯಾಯತಿಯನ್ನು ಕಾಲೇಜಿಗೆ ಮಂಜೂರು ಮಾಡುವುದನ್ನು ತಡೆಹಿಡಿದು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಅಲ್ಲದೇ ಆನ್‌ಲೈನ್ ಮೂಲಕ ಫೀ ರಿಯಾಯತಿಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆ ನೀಡಲಾಗಿತ್ತು.
ಆದರೆ, ಶೇ. 90ರಷ್ಟು ವಿದ್ಯಾರ್ಥಿಗಳಿಗೆ ಈ ವಿಷಯ ತಿಳಿದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಆದ್ದರಿಂದ ಪ್ರತಿ ವರ್ಷದಂತೆ ಫೀ ರಿಯಾಯತಿ ಹಾಗೂ ಪರೀಕ್ಷಾ ಶುಲ್ಕವನ್ನು ಈ ವರ್ಷವೂ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷಾ ಅರ್ಜಿ ತುಂಬಲು ಮಾ. 15 ಕೊನೆಯ ದಿನವನ್ನಾಗಿ ಸೂಚಿಸಿದೆ. ಈ ಅವಧಿಯೊಳಗೆ ಹಣ ಭರಿಸುವುದು ಕಷ್ಟಸಾಧ್ಯ. ಸರ್ಕಾರ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಹಾಗೂ ಪರೀಕ್ಷಾ ಶುಲ್ಕದ ರಿಯಾಯತಿ ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಂಭುಲಿಂಗ ಮಟ್ಟಿಮನಿ, ಕೇಶವ ಕೊಂಡೋಜಿ, ಸಂದೀಪ ಕಲಾಲ, ಚನ್ನವೀರ ಮುಂಡಗೋಡ, ಪ್ರಕಾಶ ಜಿಡ್ಡಿ, ಆಕಾಶ ತಹಶೀಲ್ದಾರ, ಮಂಜುನಾಥ ಕಡೇರ, ಅನೀಶ ಗೊಲ್ಲರ, ನಾಗರಾಜ ಹೊತ್ತನಳ್ಳಿ, ಹರೀಶ ಕಿತ್ತೂರ, ಮಲ್ಲಪ್ಪ ಹುಣಸಿಕಟ್ಟಿ, ಮಣಿಕಂಠ ಮಹೇಂದ್ರಕರ, ಗುರುರಾಜ ಕಂಕಾಳೆ, ವಿಜೇಂದ್ರ ತುಪ್ಪದ ಮುಂದಾಳತ್ವ ವಹಿಸಿದ್ದರು.
ಮನೋಹರ ಎಂ, ಲಕ್ಷ್ಮಿ ಮಹೇಂದ್ರಕರ, ಸಪ್ನಾ ಕೋಟಿ, ಭಾರ್ಗವಿ ಪುರೋಹಿತ, ಮಂಗಳಾ ಜಿಗಳಿ, ಮುಕ್ತಪ್ರಿಯಾ ಜಕಾತಿ, ಚೈತನ್ಯ ತುಪ್ಪದ, ಸರಸ್ವತಿ ರೇವಡಿಗಾರ, ಶ್ರೇಷ್ಠಾ ಕಲಾಲ, ಹೀನಾ ಸವನೂರ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement