ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಲೋಕಸಭಾ ಚುನಾವಣೆ ನಿಮಿತ್ತ ಅಧಿಕಾರಿಗಳ ಸಭೆ

Lingaraj Badiger
Updated On : 9 Mar 2014, 11:18 am

ಹಾನಗಲ್ಲ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿದ್ದು, ಅದರ ಅನುಷ್ಠಾಕ್ಕೆ ತಾಲೂಕಿನ 40 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಿಬ್ಬಂದಿ ನೇಮಿಸಲಾಗಿದೆ ಎಂದು ತಾಲೂಕು ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ತಿಳಿಸಿದರು.
ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರಿಗೆ ಅವರು ವಿವರ ನೀಡಿದರು.
ತಾಲೂಕಿನಲ್ಲಿ ಒಟ್ಟು 228 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಎರಡು ಕಡೆಗಳಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪನೆಗೆ ಪರಿಶೀಲಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದ ತಂಡದಲ್ಲಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಗ್ರಾಪಂ ಕಾರ್ಯದರ್ಶಿ, ಗ್ರಾಮ ಸಹಾಯಕ ಸೇರಿದಂತೆ 40 ತಂಡಗಳನ್ನು ರಚಿಸಲಾಗಿದೆ. ಅಲ್ಲದೇ 15 ಸೆಕ್ಟರ್ ಆಫೀಸರ್‌ಗಳನ್ನು ನೇಮಕಗೊಳಿಸಲಾಗಿದೆ.
ತಾಲೂಕಿನ ಬಮ್ಮನಹಳ್ಳಿ, ಹಾನಗಲ್ಲ, ಅಕ್ಕಿಆಲೂರು ಹೋಬಳಿಗಳಲ್ಲಿ ಒಂದೊಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ರಚಿಸಲಾಗಿದೆ ಎಂದು ವಿವರಿಸಿದರು.
ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ.ಬಂಡಿವಡ್ಡರ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐ ಸೇರಿ ಫ್ಲೈಯಿಂಗ್ ಸ್ಕ್ವಾಡ್ ತಂಡ ನೇಮಿಸಲಾಗಿದೆ.
ವಿಶೇಷ ಅಭಿಯಾನ:
ಮತದಾರರ ಪಟ್ಟಿ ಪರಿಷ್ಕರಣೆಗೆ ಮಾ. 16ರ ವರೆಗೆ ಅವಕಾಶ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋದ ಹೆಸರು ಸೇರ್ಪಡೆ, ಹೆಸರು ಹೊಸದಾಗಿ ಸೇರಿಸುವ ಕಾರ್ಯ ಪ್ರಾರಂಭಗೊಂಡಿದೆ. ಮಾ. 9ರಂದು ಭಾನುವಾರ ಈ ಎಲ್ಲ ಪರಿಷ್ಕರಣೆಯ ವಿಶೇಷ ಅಭಿಯಾನ ಆಯೋಜಿಸಿದ್ದು, ಅಂದು ಮತಗಟ್ಟೆ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಹಾಜರಿದ್ದು ಜ. 31ಕ್ಕೆ ಪ್ರಕಟಗೊಂಡ ಮತದಾರರ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಚುರಪಡಿಸುವರು. ಸ್ಥಳದಲ್ಲೇ 6,7,8,8ಎ ನಮೂನೆಗಳನ್ನು ಸಾರ್ವಜನಿಕರಿಂದ ಪಡೆದು ಕಚೇರಿಗೆ ಸಲ್ಲಿಸಲಿದ್ದಾರೆ. ಮತದಾರರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಸಹಾಯವಾಣಿ:
ಚುನಾವಣೆ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಹಾಗೂ ಚುನಾವಣಾ ಮಾಹಿತಿ ಪಡೆಯುವುದಕ್ಕಾಗಿ ಹಾನಗಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. 24 ಗಂಟೆಗಳ ಸೇವೆಗಾಗಿ 08379-262841 ದೂರವಾಣಿಗೆ ಸಂಪರ್ಕಿಸಬೇಕೆಂದು ತಹಸೀಲ್ದಾರ್ ಹೊನ್ನಳ್ಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಭಾರಿ ತಹಸೀಲ್ದಾರ್ ಆರ್.ಸಿ. ನದಾಫ್ ಉಪಸ್ಥಿತರಿದ್ದರು.
ಗುರುಬಸಪ್ಪ ನಿಧನ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ಗುರುಬಸಪ್ಪ ಬಸವಣ್ಣೆಪ್ಪ ಆಲದಕಟ್ಟಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಎರಡು  ಗಂಡು, ಎರಡು ಹೆಣ್ಣು ಮಕ್ಕಳು ಅಪಾರ ಬಂಧುಬಳಗ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement