ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಧಿಕಾರಿಗಳಿಲ್ಲದ ಮತಗಟ್ಟೆ: ಜನತೆ ಅಸಮಾಧಾನ

Lingaraj Badiger
Updated On : 10 Mar 2014, 11:15 am

ಹಾವೇರಿ: ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಲು ಪ್ರತಿಯೊಂದು ಮತಗಟ್ಟೆಗಳಲ್ಲಿ ಭಾನುವಾರ ವಿಶೇಷ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಆದರೆ, ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರ ಮತಗಟ್ಟೆಯಲ್ಲಿ ಯಾವ ಮತಗಟ್ಟೆ ಅಧಿಕಾರಿಯೂ ಇಲ್ಲದ್ದು ಸಾರ್ವಜನಿಕರು ಅಸಮಾಧಾನಕ್ಕೆ ಕಾರಣವಾಯಿತು.
ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸೂಚನೆ ಮೇರೆಗೆ ಭಾನುವಾರ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಕ್ಯಾಂಪ್ ಮಾಡುವುದಾಗಿ ತಿಳಿಸಲಾಗಿತ್ತು. ಅದರಂತೆ ಮಾದರಿ ಪ್ರಾಥಮಿಕ ಶಾಲೆಗೆ ಆ ಮತಗಟ್ಟೆ ವ್ಯಾಪ್ತಿಯ ಹತ್ತಾರು ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ತಿಳಿದುಕೊಳ್ಳಲು ಆಗಮಿಸಿದ್ದರು.
ಅಲ್ಲಿ ಯಾವೊಬ್ಬ ಅಧಿಕಾರಿಯೂ ಇಲ್ಲದ್ದು ಅವರ ಅಸಮಾಧಾನಕ್ಕೆ ಕಾರಣವಾಯಿತು. ನಂತರ ವಿಷಯವನ್ನು ಅಧಿಕಾರಿಗಳ ಗಮನಕ್ಕೂ ತರಲಾಯಿತು.
ಬಳಿಕ ಉಪವಿಭಾಗಾಧಿಕಾರಿ ಶಿವರಾಜ್ ಹಾಗೂ ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಅವರು ಮತಗಟ್ಟೆಗೆ ಆಗಮಿಸಿದರು. ಅಲ್ಲದೆ, ತಕ್ಷಣ ಮತಗಟ್ಟೆ ಅಧಿಕಾರಿಯನ್ನು ನಿಯೋಜಿಸಿದರು. ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವುದು, ಅದಕ್ಕಾಗಿ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸುವ ಕಾರ್ಯ ನಡೆಯಿತು. ಸುಮಾರು 2 ಗಂಟೆಗೂ ಅಧಿಕ ಕಾಲ ಸಾರ್ವಜನಿಕರು ಅಧಿಕಾರಿಗಾಗಿ ಕಾಯುವಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement