ಕ್ರಿಯಾಶೀಲತೆ ಇದ್ದರೆ ಉತ್ತಮ ಆರೋಗ್ಯ
ಹಿರೇಕೆರೂರು: ಆಧುನಿಕ ಜಗತ್ತಿನಲ್ಲಿ ಮನುಷ್ಯ ಅನೇಕ ಮಾರಕ ರೋಗಗಳಿಗೆ ಬಲಿಯಾಗುತ್ತಿರುವುದು ದುರುದೃಷ್ಟಕರವಾದದು. ದೈನಂದಿನ ಜೀವನದಲ್ಲಿ ಸತತ ಕ್ರಿಯಾಶೀಲರಾದಾಗ ಮಾನವರು ಆರೋಗ್ಯವಂತರಾಗಲು ಸಾಧ್ಯವಿದೆ. ನಿಯಮಿತ ಆಹಾರ ಪದ್ಧತಿಗಳು ಮತ್ತು ಸತತ ಕೆಲಸದಲ್ಲಿ ನಿರತರಾಗಿರಬೇಕು ಎಂದು ಜೆಸಿಐ ಅಧ್ಯಕ್ಷ ಸುರೇಶ ಅಘನಾಶಿನಿಕರ ಹೇಳಿದರು. ತಾಲೂಕಿನ ರಟ್ಟಿಹಳ್ಳಿ ಗ್ರಾಮದಲ್ಲಿ ಜೆಸಿಐ ಕದಂಬ ಹಾಗೂ ಕದಂಬ ಸೇವಾ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು. ಶಿವಮೊಗ್ಗದ ಖ್ಯಾತ ಆಯುರ್ವೇದ ವೈದ್ಯ ಡಾ. ಸುರೇಶರಾವ್, ಸ್ಥಳೀಯ ವೈದ್ಯ ಡಾ. ಶಂಭುಲಿಂಗ ಆರಾಧ್ಯಮಠ, ದ್ವಾರುಕಾ ಜೋಶಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ, ಸಲಹೆ ನೀಡಿದರು. ಶ್ರೀಧರ ನಾಯಕ, ಪ್ರದೀಪ ಕುಲಕರ್ಣಿ, ಆರ್.ಜಿ. ದ್ಯಾವಕ್ಕಳವರ, ಡಾ. ಇ.ಎಲ್. ನಾಡಿಗೇರ, ಎಂ.ಆರ್. ಬಸವನಾಳಮಠ, ಸುಬ್ರಹ್ಮಣ್ಯ ನಾಡಿಗೇರ, ಪ್ರಕಾಶ ಕುಲಕರ್ಣಿ, ಹೆಗ್ಗಪ್ಪ ಮಡಿವಾಳರ ಇದ್ದರು.