ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರು ಹೆಚ್ಚು ಹನಿ ನೀರಾವರಿ ಅಳವಡಿಸಿಕೊಳ್ಳಲಿ

Lingaraj Badiger
Updated On : 13 Mar 2014, 11:29 am

ಹಾನಗಲ್ಲ:  ಕೃಷಿಯಲ್ಲಿ ಹನಿ ನೀರು ಪ್ರಾಮುಖ್ಯತೆ ಪಡೆದಿದ್ದು, ನೀರಿನ ಸದ್ಭಳಕೆಗೆ ರೈತ ಸಮೂಹ ಗಮನ ಹರಿಸಬೇಕಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆಯುವಂತೆ ಪಯೋನಿಯರ್ ಗೋವಿನಜೋಳ ಕಂಪನಿಯ ಮಾರುಕಟ್ಟೆ ಅಧಿಕಾರಿ ಜಿ.ಆರ್. ದಿನೇಶ ಹೇಳಿದರು.
ತಾಲೂಕಿನ ಮಲಗುಂದ ಗ್ರಾಮದಲ್ಲಿ ಪಯೋನಿಯರ್ ಪಿ 3501 ಗೋವಿನಜೋಳ ಹೈಬ್ರಿಡ್ ತಳಿಯ ಮಾಹಿತಿ ಕಾರ್ಯಾಗಾರ ಮತ್ತು ಪ್ರಗತಿಪರ ಕೃಷಿಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭೂಮಿಯಲ್ಲಿ ಪೋಷಕಾಂಶದ ಕುರಿತು ರೈತ ಸಮೂಹ ಗಮನ ನೀಡದ ಪರಿಣಾಮ ಇಳುವರಿಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಭೂಮಿಯಲ್ಲಿ ಕಡಿಮೆಯಾಗಿರುವ ಪೋಷಕಾಂಶಗಳನ್ನು ಮರಳಿ ಪೂರೈಸುವತ್ತ ರೈತರು ಗಮನ ನೀಡಬೇಕಿದೆ.ಪಯೋನಿಯರ್ 3501 ಹೈಬ್ರಿಡ್ ಗೋವಿನಜೋಳ ರೈತ ಸ್ನೇಹಿಯಾಗಿದ್ದು ತಿಳುವಾದ ಬೆಂಡು, ಸಮನಾಂತರ ತೆನೆ, ಸಂಪೂರ್ಣ ಪುಚ್ಚ ಮುಚ್ಚಿಕೊಂಡಿರುತ್ತದೆ. ಈ ಬಿತ್ತನೆ ಬೀಜವನ್ನು ಬಳಕೆ ಮಾಡುವ ಮೂಲಕ ರೈತ ಸಮೂಹ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಂಪನಿಯ ವ್ಯವಸ್ಥಾಪಕ ನಾಗರಾಜ್ ಎನ್. ಮಾತನಾಡಿ, ರೈತ ಸಮೂಹ ಕೃಷಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಆವಿಷ್ಕಾರದ ಕುರಿತು ಸಕಾಲಿಕ ಮಾಹಿತಿ ಪಡೆದು ಸಮರ್ಪಕ ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಕರೆ ನೀಡಿದರು. ಪ್ರಗತಿಪರ ಕೃಷಿಕರಾದ ದೇವೇಂದ್ರಪ್ಪ ಹುಲ್ಲಾಳ, ಸುರೇಶಗೌಡ ಪಾಟೀಲ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. ರೈತರಾದ ನಾಗಪ್ಪ ಹೊಸಳ್ಳಿ, ನಿಂಗಪ್ಪ ಬಾಳಿಕೇರಿ, ಶೇಕಪ್ಪ ಹೆಬ್ಬಳ್ಳಿ, ನಾಗಪ್ಪ ಹೆಬ್ಬಳ್ಳಿ, ಚಂದ್ರು ಹೊಂಕಣ, ವಿರೂಪಾಕ್ಷಪ್ಪ ಹೆಬ್ಬಳ್ಳಿ, ಪುಟ್ಟಪ್ಪ ಬಾರ್ಕಿ, ಗುತ್ತೆಪ್ಪ ಬಳ್ಳಿಕೇರಿ, ರುದ್ರಪ್ಪ ಮಳೆಣ್ಣನವರ, ಚನ್ನಪ್ಪ ಹೆಬ್ಬಳ್ಳಿ, ಮೂಕಪ್ಪ ಪೂಜಾರ, ಆರ್.ಎಫ್. ಕಳ್ಳಿಹಾಳ, ಷಣ್ಮುಖಪ್ಪ ಹುಕ್ಕೇರಿ, ಮಂಜುನಾಥ ಬಡಿಗೇರ, ಗುತ್ತೆಪ್ಪ ಹುಕ್ಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement