ಹೊಳೆಆಲೂರು: ಪಿಯು ಪರೀಕ್ಷೆ ಆರಂಭ
ಕನ್ನಡಪ್ರಭ ವಾರ್ತೆ, ಹೊಳೆಆಲೂರು, ಮಾ. 12
ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಗಳು ರಾಜ್ಯಾದ್ಯಂತ ಬುಧವಾರದಿಂದ ಆರಂಭವಾಗಿದ್ದು, ಇಲ್ಲಿನ ಕಲ್ಮೇಶ್ವರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರು.
ಬುಧವಾರ ನಡೆದ ರಾಜ್ಯಶಾಸ್ತ್ರ ಪರೀಕ್ಷೆಗೆ 266 ವಿದ್ಯಾರ್ಥಿಗಳಲ್ಲಿ 249 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದೆ. ಪರೀಕ್ಷೆಗಳು ಬುಧವಾರದಿಂದ ಮಾ. 27ರ ವರೆಗೆ ನಡೆಯಲಿವೆ ಎಂದು ಪರೀಕ್ಷಾ ಮುಖ್ಯ ಅಧೀಕ್ಷಕ ಪ್ರಾ. ಬಿ.ಬಿ. ಬಿಜ್ಜರಗಿ ತಿಳಿಸಿದ್ದಾರೆ. ಈ ಪರೀಕ್ಷಾ ಕೇಂದ್ರಕ್ಕೆ ಸ್ಥಳೀಯ ಕಲ್ಮೇಶ್ವರ ಪಿಯು ಕಾಲೇಜು, ಯಚ್ಚರೇಶ್ವರ ಬಾಲವಿಕಾಸ ವಿದ್ಯಾ ಮಂದಿರದ ಪಿಯು ಕಾಲೇಜು, ಲಿಂಗಬಸವೇಶ್ವರ ಪಿಯು ಕಾಲೇಜು ಮೆಣಸಗಿ, ಸರ್ವೋದಯ ಪಿಯು ಕಾಲೇಜು ಶಿರೋಳ, ಕೆಇಎಸ್ ಪಿಯು ಕಾಲೇಜು ಕೊಣ್ಣೂರು ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಈ ಕೇಂದ್ರದಿಂದ ಒಟ್ಟು 470 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಸಹ ಮುಖ್ಯ ಅಧಿಕ್ಷಕರಾಗಿ ಎಚ್.ಎಸ್. ರಾಜೂರ ಹಾಗೂ ವಿಶೇಷ ಸ್ಥಾನಿಕ ಜಾಗ್ರತ ಸದಸ್ಯರಾಗಿ 4 ಜನ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜ್ಜರಗಿ ತಿಳಿಸಿದರು.