ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

18ರಂದು ಗೀತಗಾಯನ ಸ್ಪರ್ಧೆ

Lingaraj Badiger
Updated On : 14 Mar 2014, 11:32 am

ಹಾವೇರಿ:  ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಜಿಲ್ಲಾ ಪರಂಪರೆ ಕೂಟ ಹಾವೇರಿ ಇವುಗಳ ಆಶ್ರಯದಲ್ಲಿ ಪರಂಪರೆ ಕುರಿತ ಜಾನಪದ ಗೀತಗಾಯನ ಸ್ಪರ್ಧೆಯನ್ನು ಮಾ. 18ರಂದು ಏರ್ಪಡಿಸಲಾಗಿದೆ. ಈ ಸ್ಪರ್ಧೆ ಹಾವೇರಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ. ಸ್ಪರ್ಧೆ ಮಾ. 18ರಂದು ಮಧ್ಯಾಹ್ನ 1 ಗಂಟೆಗೆ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಒಬ್ಬರಿಗೆ ಗರಿಷ್ಠ 5 ನಿಮಿಷಗಳ ಅವಧಿ ನೀಡಲಾಗುವುದು. ಯಾವುದೇ ರೀತಿಯ ಸಾಹಿತ್ಯ, ವಾದ್ಯ ಸಲಕರಣೆಗಳನ್ನು ಬಳಸುವಂತಿಲ್ಲ. ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಭಾವಚಿತ್ರವಿರುವ ಪ್ರವೇಶ ಪತ್ರಗಳನ್ನು ಪ್ರಾಚಾರ್ಯರ ದೃಢೀಕರಣದೊಂದಿಗೆ ಮಾ. 17ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧಿಗಳಿಗೆ ಜಿಲ್ಲಾ ಪರಂಪರೆ ಕೂಟದ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನ ರು. 2,500, ದ್ವಿತೀಯ ರು. 1500 ಹಾಗೂ ತೃತೀಯ ರು. 1 ಸಾವಿರ ನೀಡಲಾಗುವುದು ಎಂದು ಪ್ರಾಚಾರ್ಯ ಡಾ೤ ಬಿ.ಸಿ. ಬನ್ನೂರ, ಜಿಲ್ಲಾ ಪರಂಪರೆ ಕೂಟದ ಸಂಚಾಲಕ ಶಿವಯೋಗಿ ಕೋರಿಶೆಟ್ಟರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement