ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಾಲಕಿ ಮಾರಾಟ: ಆರೋಪಿಗಳ ಬಂಧನ

Lingaraj Badiger
Updated On : 14 Mar 2014, 11:26 am

ಶಿಗ್ಗಾಂವಿ:  ತಾಲೂಕಿನ ಗಂಗ್ಯಾನೂರ ಗ್ರಾಮದ ಕುಟುಂಬವೊಂದರ ಬಡತವನ್ನು ಬಂಡವಾಳವಾಗಿಸಿಕೊಂಡು ಮಹಿಳೆಯೊಬ್ಬಳು ಆ ಕುಟುಂಬದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಮದುವೆ ಮಾಡಿಸುವ ನೆಪದಲ್ಲಿ ಮುಂಬೈ ನಗರದಲ್ಲಿ ಮಾರಾಟ ಮಾಡಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
ಗಂಗ್ಯಾನೂರು ಗ್ರಾಮದ ಮಂಜಪ್ಪ ಸುಣಗಾರ ಎಂಬುವರ 13 ವರ್ಷದ ಮಗಳಿಗೆ ಉತ್ತಮ ಸಂಬಂಧ ನೋಡಿ ಮದುವೆ ಮಾಡಿಸುವುದಾಗಿ ಹೇಳಿ ಮುಂಬೈ ನಿವಾಸಿ ಮಾಲಾ ಲಲಿತ್ ಹಾಗೂ ಆಕೆಯ ತಾಯಿ ತಾಲೂಕಿನ ಲಕ್ಕಿಕೊಪ್ಪ ಗ್ರಾಮದ ಯಲ್ಲವ್ವ ಉರ್ಫ್ ರಾಜಲಕ್ಷ್ಮಿ ಉಪೇಂದ್ರ ಕಾಮತ್ ಸೇರಿ, ಪಾಲಕರಿಗೆ ಹಣದ ಆಮಿಷ ತೋರಿಸಿ ಬಾಲಕಿಯನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಮಂಜಪ್ಪ ಸುಣಗಾರನ ಮೊದಲ ಪತ್ನಿಯ ಮಗಳಾದ ಈಕೆಯನ್ನು ಕಳೆದ ತಿಂಗಳು ಮುಂಬೈಗೆ ಕರೆದೊಯ್ದು ಮಾ. 7ರಂದು ಮದುವೆ ಮಾಡಿಸಿದ್ದಾಗಿ ಹೇಳಲಾಗುತ್ತಿದೆ. ಬಾಲಕಿಯ ತಂದೆ, ಮಲತಾಯಿ ಲಕ್ಷ್ಮಿ ಸುಣಗಾರ ಹಾಗೂ ರಾಜಲಕ್ಷ್ಮಿ ಕಾಮತ್ ಸೇರಿ, ಆಕೆಯನ್ನು ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ಯುವತಿಯ ಸೋದರ ಮಾವ ನರೇಗಲ್ಲಿನ ಸುರೇಶ ತಮ್ಮಣ್ಣನವರ ಎಂಬುವರು ಶಿಗ್ಗಾಂವಿ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದಾರೆ.
ದೂರಿನನ್ವಯ ಆರೋಪಿಗಳಾದ ಮಂಜಪ್ಪ ಸುಣಗಾರ, ಲಕ್ಷ್ಮಿ ಸುಣಗಾರ ಹಾಗೂ ರಾಜಲಕ್ಷ್ಮಿ ಕಾಮತ್ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement