ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೆಂಕಿ: ಲಕ್ಷಾಂತರ ಮೌಲ್ಯದ ಬೆಳೆ ಹಾನಿ

Lingaraj Badiger
Updated On : 14 Mar 2014, 11:25 am

ಶಿಗ್ಗಾಂವಿ:  ಹೊಲದ ದಂಡೆಯ ಮೇಲೆ ಬೆಳೆದ ಕಳೆಯನ್ನು ಸುಡಲು ಹಚ್ಚಿದ ಬೆಂಕಿ ಕಾಡ್ಗಿಚ್ಚಿನ ಸ್ವರೂಪ ಪಡೆದು ಸುಮಾರು 10 ಕಿಮಿಗೂ ಹೆಚ್ಚು ಪ್ರದೇಶವನ್ನು ಆಕ್ರಮಿಸಿಕೊಂಡು ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾದ ಘಟನೆ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಗುರುವಾರ ಸಂಭವಿಸಿದೆ.
ತಾಲೂಕಿನ ಕಲ್ಯಾಣ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಕಳೆ ಸುಡಲು ಹಚ್ಚಿದ ಬೆಂಕಿ ಗಾಳಿಯಿಂದ ಕಾಡ್ಗಿಚ್ಚಿನ ರೂಪ ಪಡೆದು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ಹತ್ತಿಕೊಳ್ಳುತ್ತಾ ಶಿಗ್ಗಾಂವಿ ಪಟ್ಟಣದ ಹೊರವಲಯದ ನಾಗನೂರು ಕೆರೆ ಪಕ್ಕದ ಪ್ರದೇಶ ರಾಜೀವ ನಗರದ ಮೂಲಕ ಹಾಯ್ದು ಜಕೀನಕಟ್ಟಿ ಗ್ರಾಮದ ಹತ್ತಿರದವರೆಗೂ ವ್ಯಾಪಿಸಿದೆ.  12-30 ಗಂಟೆ ಸುಮಾರಿಗೆ ಸುದ್ದಿ ತಿಳಿದ ಅಗ್ನಿ ಶಾಮಕದಳ ಬೆಂಕಿ ನಂದಿಸುವ ಪ್ರಯತ್ನಕ್ಕೆ ಮುಂದಾಗಿ ನಿಯಂತ್ರಣಕ್ಕೆ ಬಾರದಿದ್ದಾಗ ಸವಣೂರಿನ ಎರಡು ಅಗ್ನಿ ಶಾಮಕ ವಾಹನಗಳೂ ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಸತತ 6 ಗಂಟೆಗಳ ಪರಿಶ್ರಮದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ.
ಶಿಗ್ಗಾಂವಿ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಕೃಷ್ಣಪ್ಪ ನೇತೃತ್ವದಲ್ಲಿ ಸುಮಾರು 30 ಜನ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಬೆಂಕಿಯ ಆರ್ಭಟಕ್ಕೆ ನಾಲ್ಕು ಮಾವಿನತೋಟಗಳು, ಒಂದು ಗೋಡಂಬಿ ತೋಟ, ಸುಮಾರು 20 ಎಕರೆ ತೊಗರಿ ಬೆಳೆ ಸೇರಿದಂತೆ ಜಾನುವಾರುಗಳ ವರ್ಷದ ಆಹಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಐದಾರು ಭತ್ತದ ಬಣವೆಗಳು ಸುಟ್ಟು ಕರಕಲಾಗಿವೆ.
ಒಂದು ಕಡೆ ಬೆಂಕಿ ನಂದಿಸುತ್ತಿದ್ದರೆ, ಇನ್ನೊಂದು ಕಡೆಯಿಂದ ರೈತರು ನಮ್ಮ ಹೊಲಕ್ಕೂ ಬೆಂಕಿ ಹತ್ತೇತಿ ಜಲ್ದಿ ಬರ್ರೀ....ಎಂದು ಅಗ್ನಿಶಾಮಕ ಸಿಬ್ಬಂದಿಗೆ ಗೋಗರೆಯುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement