ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜೆಡಿಎಸ್ ಸೇರಲು ಮುಕ್ತ ಆಹ್ವಾನ: ಬೇವಿನಮರದ

Lingaraj Badiger
Updated On : 15 Mar 2014, 12:28 pm

ಹಾವೇರಿ: ಮಾಜಿ ಪ್ರಧಾನಿ ದೇವೇಗೌಡ ಅವರ ರೈತಪರ ಹೋರಾಟ, ಕಾಳಜಿ ಮತ್ತು ಜೆಡಿಎಸ್ ಜಾತ್ಯತೀತ ಸಿದ್ಧಾಂತಗಳನ್ನು ಮೆಚ್ಚಿ ನವಭಾರತ ನಿರ್ಮಾಣಕ್ಕೆ ಸಜ್ಜಾಗಿರುವ ಪಕ್ಷ ರಾಜ್ಯಾದ್ಯಂತ ಸಂಘಟನೆ ತೀವ್ರಗೊಳಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೇವಿನಮರದ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಎಲ್ಲ ಕಡೆ ಪ್ರಾಮಾಣಿಕ ಹಾಗೂ ನಿಷ್ಠಾವಂತರನ್ನು ಕಣಕ್ಕಿಳಿಸಿರುವ ಪಕ್ಷದ ಹಿರಿಯರಾದ ದೇವೇಗೌಡರ ಕೈ ಬಲಪಡಿಸಲು ಹಾಗೂ ದೇಶ ಹಾಗೂ ರಾಜ್ಯದಲ್ಲಿ ಜಾತ್ಯತೀತ ಧೋರಣೆ, ತತ್ವಗಳನ್ನು ಗಟ್ಟಿಗೊಳಿಸಲು ಪಕ್ಷದ ಮುಖಂಡರು ಎಲ್ಲೆಡೆ ಸಂಘಟನೆಯ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಸಿದ್ಧಾಂತ ಹಾಗೂ ತತ್ವಗಳನ್ನು ಮೆಚ್ಚಿ ಪಕ್ಷಕ್ಕೆ ಬರುವ ಯಾವುದೇ ಪಕ್ಷದ ಧುರೀಣರಿಗೂ, ಅಭಿಮಾನಿಗಳಿಗೂ, ಯುವ ಜನತೆಗೆ ಮುಕ್ತ ಸ್ವಾಗತವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement