ಸ್ಥಿರ ಕಣ್ಗಾವಲು ತಂಡ ರಚನೆ
ಹಾವೇರಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ಚುನಾವಣೆ ಜರುಗಿಸಲು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ತಾಲೂಕು ಮಟ್ಟದಲ್ಲಿ ಸ್ಥಿರ ಕಣ್ಗಾವಲು ತಂಡ (ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಂ) ರಚಿಸಿ, ಅಧಿಕಾರಿಗಳ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾನಗಲ್ಲ ತಾಲೂಕಿಗೆ ಜಿಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಝೆಡ್.ಎಂ. ಖಾಜಿ (ಮೊ. 9480835635), ಶಿಗ್ಗಾಂವಿ-ಸವಣೂರು ತಾಲೂಕಿಗೆ ಗಣಿ-ಭೂ ವಿಜ್ಞಾನ ಇಲಾಖೆ ಭೂವಿಜ್ಞಾನಿ ಶ್ರೀನಿವಾಸ ಕೆ. (9686043620), ಹಾವೇರಿ ತಾಲೂಕಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕ ಶ್ರೀಧರ (7259005475), ಹಿರೇಕೆರೂರು ತಾಲೂಕಿಗೆ ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆ ಪ್ರೋಗ್ರಾಂ ಆಫೀಸರ್ ವಿಜಯಕುಮಾರ (9538993366), ಬ್ಯಾಡಗಿ ತಾಲೂಕಿಗೆ ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಿಗೇರ (9449967171) ಹಾಗೂ ರಾಣಿಬೆನ್ನೂರು ತಾಲೂಕಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ. ಹೊರಟ್ಟಿ (9449779680) ಅವರನ್ನು ನೇಮಿಸಿದ್ದು, ಮುಖ್ಯ ಚುನಾವಣಾಧಿಕಾರಿಗಳು ನೀಡುವ ನಿರ್ದೇಶನ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ತಿಳಿಸಿದ್ದಾರೆ.
ಲೈಜನ್ ಅಧಿಕಾರಿ ನೇಮಕ
ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಹಾವೇರಿ ಲೋಕಸಭಾ ಕ್ಷೇತ್ರ ಚುನಾವಣಾ ನಿಮಿತ್ತ ಆಗಮಿಸುವ ಚುನಾವಣಾ ವೀಕ್ಷಕರಿಗೆ ಸಹಾಯಕರಾಗಿ ಲೈಜನ್ ಅಧಿಕಾರಿ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಚುನಾವಣಾ ವೆಚ್ಚ ವೀಕ್ಷಕ ವಸಂತ ಗೆಸನ್‌ಗೆ ಲೈಜನ್ ಅಧಿಕಾರಿಯಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ. ರಾಜೀವ ಕೂಲೇರ ಅವರನ್ನು ನೇಮಿಸಿದೆ. ಲೈಜನ್ ಅಧಿಕಾರಿಗಳು ತಮಗೆ ನಿಯೋಜಿಸಿದ ಚುನಾವಣಾ ವೀಕ್ಷಕರಿಗೆ ಅವರು ಕೇಳುವ ಎಲ್ಲ ಮಾಹಿತಿ ಒದಗಿಸುವುದು, ಚುನಾವಣಾ ವೀಕ್ಷಕರ ಕಚೇರಿ ನಿರ್ವಹಣೆ, ಪತ್ರ ವ್ಯವಹಾರ ನೋಡಿಕೊಳ್ಳಬೇಕು.