ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

Lingaraj Badiger
Updated On : 19 Mar 2014, 12:21 pm

ಮುಂಡರಗಿ: ಪುರಸಭೆಯ ಬಿಜೆಪಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೋಮವಾರ ರಾತ್ರಿ ಪಟ್ಟಣದ ವಿವಿಧ ಭಾಗಗಳಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗಳಿಗೆ ತೆರಳಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಮೋಹನ ದೇಸಾಯಿ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಭಾರಿ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದರು.
ಇನ್ನೋರ್ವ ಸದಸ್ಯ ಸುರೇಶ ಮಾಳೆಕೊಪ್ಪ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯ ಮೂಲ ಮಂತ್ರವಾಗಿದ್ದು, ಅದನ್ನು ಈಡೇರಿಸುವ ಸಲುವಾಗಿ ಮತದಾರರು ಬಿಜೆಪಿಗೆ ಮತ ನೀಡಬೇಕು ಎಂದರು. ಶಂಕರಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್ ದೇಶದ ಅಭಿವೃದ್ಧಿ ಕಡೆಗಣಿಸಿ ಸ್ವಾರ್ಥ ರಾಜಕಾರಣ ಮಾಡಿದೆ ಎಂದರು. ನಂತರ ಬಿಜೆಪಿ ಕಾರ್ಯಕರ್ತರು ಕೋಟೆ ಭಾಗ, ಮಸೂತಿ ಓಣಿ, ತೋಂಟದಾರ್ಯ ರಸ್ತೆ, ಜಾಗ್ರತ ವೃತ್ತ, ದುರ್ಗಾದೇವಿ ನಗರ, ಅಂಬೇಡ್ಕರ್ ನಗರ ಮೊದಲಾದ ಭಾಗಗಳಲ್ಲಿ ಸಂಚರಿಸಿ ಮತದಾರರನ್ನು ಭೇಟಿ ಮಾಡಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಪುರಸಭೆ ಸದಸ್ಯ ಪರಶುರಾಮ ಕರಡಿಕೊಳ್ಳ, ಕೊಟ್ರಮ್ಮ ಇಟಗಿ, ಶಾಂತವ್ವ ಬಳ್ಳಾರಿ, ಬಿಜೆಪಿ ಯುವ ಕಾರ್ಯದರ್ಶಿ ದೇವಪ್ಪ ಇಟಗಿ, ಮಂಜುನಾಥ ಇಟಗಿ, ಶಿವು ನಾಡಗೌಡ್ರ, ಗಣೇಶ ಹಾತಲಗೇರಿ, ಜಗದೀಶ ಉಳ್ಳಾಗಡ್ಡಿ, ಸುಮಂಗಲಾ ಡೊಣ್ಣಿ, ರೇಣವ್ವ ಬಾರಕೇರ, ಗೂಡುಮಾ ಅಳವುಂಡಿ, ಪ್ರೇಮವ್ವ ದೊಡ್ಡಮನಿ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement