ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಹಿಳೆಯ ಮಾನ, ಪ್ರಾಣ ಸುರಕ್ಷಿತವಾಗಿರಲಿ

Lingaraj Badiger
Updated On : 19 Mar 2014, 12:31 pm

ಅಣ್ಣಿಗೇರಿ: ಕುಟುಂಬದ ಆದರ್ಶ ನಾರಿಯಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆ ಮುನ್ನುಗ್ಗಿರುವುದು ದೇಶದ ಅಭಿವೃದ್ಧಿ ಸಂಕೇತ ಎಂದು ಉಪನ್ಯಾಸಕಿ ಡಾ. ಸುಧಾ ಕೌಜಗೇರಿ ಹೇಳಿದರು.
ಪುರಸಭೆಯಲ್ಲಿ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಯರು ಕಾಲಿಡದ ಕ್ಷೇತ್ರವಿಲ್ಲ. ಅವರಲ್ಲಿರುವ ಬುದ್ಧಿಶಕ್ತಿ, ಶ್ರಮ, ಛಲ, ಸಾಧನೆ, ಸಹನೆಗಳ ಫಲಶ್ರುತಿಯೇ ಹೊರತು ಯಾವುದೇ ಹಂಗಿನಿಂದಲ್ಲ. ಸ್ತ್ರೀ ಶೋಷಣೆಯಲ್ಲಿ ಪರೋಕ್ಷವಾಗಿ ನೇರವಾಗಿ ತೋರಿಕೆಯ ಮಾತನಾಡುವ ಜನರು ಭಾಗಿಯಾಗಿರುವುದು ದೇಶದ ಅತಿ ದೊಡ್ಡ ದುರಂತ ಎಂದರು.
ಇಂದಿನ ಸ್ಥಿತಿಗತಿ ಅವಲೋಕಿಸಿದರೇ ಮಹಿಳೆಯರು ಮಾನ-ಪ್ರಾಣ ಸುರಕ್ಷಿತವಾಗಿರಬೇಕಿದೆ. ಸ್ತ್ರೀ ಶೋಷಣೆ ಬೇರು ಮಟ್ಟದಿಂದ ನಿರ್ಮೂಲನೆಯಾಗಬೇಕಿದೆ. 103ನೇ ವಿಶ್ವ ಮಹಿಳಾ ದಿನಾಚರಣೆಯ ಆಚರಣೆ ಪರಿಪಾಠವಾಗದೇ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ವಿಜಯಲಕ್ಷ್ಮಿ ಜೋಶಿ, ಮೆಹಬೂಬ ತಹಸೀಲ್ದಾರ, ಪ್ರಶಾಂತ ಹಳ್ಳಿ ಮಹಿಳೆಯ ಆರೋಗ್ಯ ಕುರಿತು ಮಾತನಾಡಿದರು.  ಮಹಿಳಾ ಕಾನೂನು ಹಾಗೂ ದೌರ್ಜನ್ಯ ಕುರಿತು ಉಪನ್ಯಾಸ ಎಂ.ಎಂ. ಶಿಶ್ವಿನಹಳ್ಳಿ ನೀಡಿದರು. ಶಾರದಾ ಹರ್ಲಾಪುರ ಪ್ರಾರ್ಥಿಸಿದರು. ಯೋಜನಾ ಸಂಘಟನಾಧಿಕಾರಿ ಜೆ.ಸಿ. ಹೂಗಾರ ಪ್ರಾಸ್ತವಿಕ ಮಾತನಾಡಿದರು. ಶಾಂತಮ್ಮ ಬೆಳೆಯಲಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್ ಬಾಳೋಜಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement