ಮಹಿಳೆಯರೆಲ್ಲರೂ ಶಿಕ್ಷಣವಂತರಾಗಲಿ: ಅಶ್ವಿನಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ. 20
ಮಹಿಳೆ ಸಾಕ್ಷರಳಾದಲ್ಲಿ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಆದ್ದರಿಂದ ಮಹಿಳೆಯರೆಲ್ಲರೂ ಉತ್ತಮ ಶಿಕ್ಷಣವಂತರಾಗುವುದು ಅವಶ್ಯ ಎಂದು ನಗರಸಭೆ ಪೌರಾಯುಕ್ತೆ ಅಶ್ವಿನಿ ಬಿ.ಎಂ. ಹೇಳಿದರು.
ಇಲ್ಲಿನ ವೀರಮದಕರಿ ನಾಯಕ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೊಟ್ಟಿಲ ತೂಗುವ ಕೈ ದೇಶವನ್ನೇ ತೂಗಬಲ್ಲದು ಎಂಬಂತೆ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದ ಮಹಿಳಾ ಮಣಿಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಂತೆ ಹೋರಾಡಿದವರಲ್ಲಿ ಮಹಿಳೆಯರು ನಮ್ಮ ಪಾತ್ರ ಏನೆಂಬುವುದನ್ನು ತೋರಿಸಿಕೊಟ್ಟಿದ್ದಾರೆ. ನಮ್ಮ ವೀರ ವನಿತೆಯರು ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ವಿದ್ಯಾರ್ಥಿನಿಯರು ಉತ್ತಮ್ಮ ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ದೇಶದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮುಂದಾಗಬೇಕೆಂದು ಹೇಳಿದರು. ರತ್ನಮ್ಮ ಬಡಕರಿಯಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸಿ.ಎಚ್. ಕುಲಕರ್ಣಿ ಉದ್ಘಾಟಿಸಿದರು. ರಮೇಶ ಬಡಕರಿಯಪ್ಪನವರ ಶಾಲೆಯ ವಾರ್ಷಿಕ ಮಾಹಿತಿ ಹಾಗೂ ಸಂಸ್ಧೆಯ ಪರಿಚಯ ಮಾಡಿದರು. ಮುಖ್ಯೋಪಾಧ್ಯಾಯರಾದ ಎಸ್.ಆರ್. ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪಿ.ಎಂ. ತುವಾರ, ಎಂ.ಎಚ್. ಕುಸುಮಾ, ಶಿಲ್ಪಾ ಬಿ.ವೈ, ಅನುರಾಧಾ, ಚಳ್ಳಣ್ಣನವರ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದವರಿಗೆ ಬಹುಮಾನ ವಿತರಿಸಲಾಯಿತು.
--
ಶಿಕ್ಷಣ ಸಂಸ್ಥೆಗಳ ಪಾತ್ರ ಅಪಾರ: ವಿಶ್ವನಾಥಗೌಡ್ರ ಪಾಟೀಲ
ಶಿಗ್ಗಾಂವಿ: ಶೈಕ್ಷಣಿಕ ಸುಧಾರಣೆಗೆ ಶಿಕ್ಷಣ ಸಂಸ್ಥೆಗಳ ಪಾತ್ರ ದೊಡ್ಡದು. ಹೀಗಾಗಿ ಸುಮಾರು ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಪ್ರಚಾರ ಮಾಡುವಲ್ಲಿ ಖ್ಯಾತಿ ಹೊಂದಿವೆ ಎಂದು ಕುಂದೂರ ಶಿಕ್ಷಣ ಸಮಿತಿ ಅಧ್ಯಕ್ಷ ವಿಶ್ವನಾಥಗೌಡ್ರ ಪಾಟೀಲ ಹೇಳಿದರು.
ತಾಲೂಕಿನ ಕುಂದೂರ ಗ್ರಾಮದ ಶ್ರೀ ಗುರು ಕೊಟ್ಟೂರೇಶ್ವರ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಂಪರಾಗತವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿವೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ವಿ. ಯಲಿಗಾರ ಅವರನ್ನು ಸಂಸ್ಥೆ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸಂಸ್ಥೆ ಕಾರ್ಯದರ್ಶಿ ಬಿ.ಜಿ. ಹಾವಣಗಿ, ಬಿ.ಬಿ. ಪಾಟೀಲ, ಎಸ್.ಎನ್.ಪಾಟೀಲ, ಬಿ.ಸಿ. ಪಾಟೀಲ, ಎನ್.ಬಿ. ಪಾಟೀಲ, ಎಂ.ಜಿ. ಬಾರ್ಕಿ, ಎಂ.ಪಿ. ಹಡಪದ, ಎಸ್.ಎನ್. ತುಪ್ಪದ, ಎ.ವಿ. ಕೌಜಗೇರಿ, ಎಂ.ಸಿ. ಹಜಾರೆ, ಎ.ಎಫ್. ಗುಡಿಮನಿ ಮತ್ತಿತರರು ಉಪಸ್ಥಿತರಿದ್ದರು.
ಎಸ್.ವಿ. ಪಾಟೀಲ ಸ್ವಾಗತಿಸಿದರು. ಜೆ.ಆರ್. ತಳವಾರ ನಿರೂಪಿಸಿದರು. ವಿ.ಪಿ. ಭಂಗಿ ವಂದಿಸಿದರು.