ಸಹಾಯಕ ಚುನಾವಣಾಧಿಕಾರಿಗಳ ನೇಮಕ
ಹಾವೇರಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಾವೇರಿ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕಮಾಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ಆದೇಶ ಹೊರಡಿಸಿದ್ದಾರೆ.
ಶಿರಹಟ್ಟಿ(ಎಸ್‌ಸಿ) ಕ್ಷೇತ್ರಕ್ಕೆ ಗದಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಗದಗ ಕ್ಷೇತ್ರಕ್ಕೆ ಗದಗ ಉಪವಿಭಾಗಾಧಿಕಾರಿಗಳು, ರೋಣ ಕ್ಷೇತ್ರಕ್ಕೆ ಗದಗ ಜಿಪಂ ಉಪ ಕಾರ್ಯದರ್ಶಿ, ಹಾನಗಲ್ಲ ಕ್ಷೇತ್ರಕ್ಕೆ ಹಾವೇರಿ ಜಂಟಿ ಕೃಷಿ ನಿರ್ದೇಶಕರು, ಹಾವೇರಿ(ಎಸ್‌ಸಿ) ಕ್ಷೇತ್ರಕ್ಕೆ ಹಾವೇರಿ ಉಪವಿಭಾಗಾಧಿಕಾರಿಗಳು, ಬ್ಯಾಡಗಿ ಕ್ಷೇತ್ರಕ್ಕೆ ಭೂ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಭೂ ದಾಖಲೆಗಳ ಇಲಾಖೆ ಪದನಿಮಿತ್ತ ಉಪ ನಿರ್ದೇಶಕರು, ಹಿರೇಕೆರೂರು ಕ್ಷೇತ್ರಕ್ಕೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು, ರಾಣಿಬೆನ್ನೂರು ಕ್ಷೇತ್ರಕ್ಕೆ ರಾಣಿಬೆನ್ನೂರು ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ಹಾವೇರಿ ಮತ್ತು ಗದಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಚುನಾವಣೆ: ಲೈಜನ್ ಅಧಿಕಾರಿ ನೇಮಕ
ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಹಾವೇರಿ ಲೋಕಸಭಾ ಕ್ಷೇತ್ರ ಚುನಾವಣಾ ನಿಮಿತ್ತ ಆಗಮಿಸುವ ಚುನಾವಣಾ ವೀಕ್ಷಕರಿಗೆ ಸಹಾಯಕರಾಗಿ ಲೈಜನ್ ಅಧಿಕಾರಿಯನ್ನು ನೇಮಕಮಾಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಸಾಮಾನ್ಯ ವೀಕ್ಷಕರಾದ ಡಿ. ಸತಪಥಿ (ಮೊ. 9437758292) ಅವರಿಗೆ ಲೈಜನ್ ಅಧಿಕಾರಿಯಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಲ್ಲೇಶಪ್ಪ ಹೊರಪೇಟಿ (ಮೊ. 9902597266) ಅವರನ್ನು ನೇಮಕ ಮಾಡಲಾಗಿದೆ. ಲೈಜನ್ ಅಧಿಕಾರಿಗಳು ತಮಗೆ ನಿಯೋಜಿಸಿದ ಚುನಾವಣಾ ವೀಕ್ಷಕರಿಗೆ ಅವರು ಕೇಳುವ ಎಲ್ಲ ಮಾಹಿತಿಗಳನ್ನು ಒದಗಿಸುವುದು ಹಾಗೂ ಚುನಾವಣಾ ವೀಕ್ಷಕರ ಕಾರ್ಯಾಲಯದ ನಿರ್ವಹಣೆ ಮತ್ತು ಪತ್ರ ವ್ಯವಹಾರ ನೋಡಿಕೊಳ್ಳಬೇಕೆಂದು ಆದೇಶ ಮಾಡಿದ್ದಾರೆ.