ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಬ್ಯಾಡಗಿಯಲ್ಲಿ ಸಲೀಂ ಅಹ್ಮದ್ ಪ್ರಚಾರ

Mainashree
Updated On : 29 Mar 2014, 9:52 am

ಬ್ಯಾಡಗಿ:  ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂಅಹ್ಮದ ಮಾ. 29ರಂದು ಚುನಾವಣಾ ಪ್ರಚಾರಾರ್ಥವಾಗಿ ಬ್ಯಾಡಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ರೋಡ್‌ಶೋ ಮೂಲಕ ಮತಯಾಚನೆ ಮಾಡಲಿರುವ ಅವರು, ಸಂಗಮೇಶ್ವರ ನಗರದಲ್ಲಿರುವ ಶಾಸಕ ಬಸವರಾಜ ಶಿವಣ್ಣನವರ ನಿವಾಸದಿಂದ ಆರಂಭವಾಗಲಿದ್ದು ಪುರಸಭೆ, ಬೀರೇಶ್ವರ ದೇವಸ್ಥಾನ, ಮುಖ್ಯರಸ್ತೆ, ಚಾವಡಿ ರೋಡ್, ಕುಂಬಾರಓಣಿ, ಕದರಮಂಡಲಗಿ ರಸ್ತೆ ನೆಹರು ನಗರ ಸಂಚರಿಸಿ ಬಳಿಕ ದಾನಮ್ಮದೇವಿ ದೇವಸ್ಥಾನದಲ್ಲಿ ಕೊನೆಗೊಳ್ಳಲಿದೆ.
31 ರಂದು ಪ್ರಚಾರ
ಮಾ. 31 ರಂದು ಬ್ಯಾಡಗಿ ಮತಕ್ಷೇತ್ರದಲ್ಲಿ ಮತಯಾಚನೆ ಮಾಡಲಿರುವ ಸಲೀಂಅಹ್ಮದ್ ಬೆಳಗ್ಗೆ 9ಗಂಟೆಗೆ ದೇವಗಿರಿ, 10 ಕ್ಕೆ ನಾಗನೂರ, 11 ಗಂಟೆಗೆ ದೇವಿಹೊಸೂರ, 12ಕ್ಕೆ ಕಬ್ಬೂರ ಮಧ್ಯಾಹ್ನ 2 ಗಂಟೆಗೆ ಚಿಕ್ಕಬಾಸೂರ, 3 ಗಂಟೆಗೆ ಕಾಗಿನೆಲೆ, ಸಂಜೆ 4 ಗಂಟೆಗೆ ಹೆಡಿಗ್ಗೊಂಡ, 5 ಗಂಟೆಗೆ ಕುರಬಗೊಂಡ, 5.30ಕ್ಕೆ ಚಿಕ್ಕಲಿಂಗದಳ್ಳಿ ಗ್ರಾಮಗಳಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ತಾಲೂಕಾಧ್ಯಕ್ಷ ಎಚ್.ಎಚ್. ದೊಡಮನಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಸುರೇಶಗೌಡ ಪಾಟೀಲ, ಮುಖಂಡರಾದ ಎಸ್.ಆರ್. ಪಾಟೀಲ, ಎಸ್.ಸಿ. ಶಿಡೇನೂರ, ಬಸವರಾಜ ಸವಣೂರ, ದಾನಪ್ಪ ಚೂರಿ, ಲಿಂಗಪ್ಪ ಕೊಂಬಳಿ, ವಿರೇಶ ಮತ್ತಿಹಳ್ಳಿ ಉಪಸ್ಥಿತರಿರುವರು. ಚುನಾಯಿತ ಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement