ಜಗತ್ತಿಗೆ ಜ್ಞಾನದ ಕಿಂಡಿ ತೋರಿಸಿದ್ದು ಬಸವಣ್ಣ
ಶಿಗ್ಗಾಂವಿ: ಜಗತ್ತಿಗೆ ಜ್ಞಾನದ ಕಿಂಡಿಯನ್ನು 12ನೇ ಶತಮಾನದಲ್ಲಿಯೇ ತೋರಿಸಿದ ಮಹಾ ಪುರುಷ ಬಸವಣ್ಣನವರು ಎಂದು ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಹೇಳಿದರು.
ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಣ್ಣನವರು ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಮಹಾಪುರುಷ. ಅವರು ಕೆಳಸ್ತರದ, ಶೋಷಿತ ವರ್ಗದ ಜನರ ಪರ ಧ್ವನಿಗೂಡಿಸಿದರು. ಎಲ್ಲ ವರ್ಗದ ಜನರು ಒಂದೇ ತರಹದ ಬದುಕು ನಡೆಸಬೇಕು ಎಂದು ಬಯಸಿದ್ದರು ಎಂದು ತಿಳಿಸಿದರು.
ಡಾ. ಶ್ರೀಶೈಲ ಹುದ್ದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಧೀಕ್ಷಕ ಬಿ.ಡಿ. ನಾಯಕ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಡಾ. ಬಸಪ್ಪ ವೈ. ಬಂಗಾರಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಗೇಟಿಯವರು ಸ್ವಾಗತಿಸಿದರು. ಡಾ. ಭಾರತಿ ಮರವಂತೆ ವಂದಿಸಿದರು.