ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತಹಸೀಲ್ದಾರ್ ಭಕ್ತಿ ಸಮರ್ಪಣೆ

Lingaraj Badiger
Updated On : 3 May 2014, 11:59 am

ಬ್ಯಾಡಗಿ: ಸ್ಥಳೀಯ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಬಸವೇಶ್ವರ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಶಿವಶಂಕರ ನಾಯ್ಕ್ ಬಸವೇಶ್ವರ ಪುತ್ಥಳಿಗೆ ಹೂವಿನಹಾರ ಹಾಕಿ ಭಕ್ತಿ ಸಮರ್ಪಿಸಿದರು. ಬಳಿಕ ಮಾತನಾಡಿದ ತಹಸೀಲ್ದಾರ್ ಶಿವಶಂಕರ ನಾಯಕ್, ಜಾತಿ ಮತ್ತು ವರ್ಗ ಪದ್ಧತಿಯನ್ನು ದೂರತಳ್ಳಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಬಸವೇಶ್ವರರ ಕೊಡುಗೆ ಅಪಾರ, ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿದ್ದ ಕಂದಾಚಾರ, ಮೂಢನಂಬಿಕೆ, ಮುಂತಾದ ಸಾಮಾಜಿಕ ಮೌಢ್ಯಗಳನ್ನು ತೊಲಗುವಂತೆ ಮಾಡಲು ಶ್ರಮಿಸಿದ ಬಸವೇಶ್ವರರು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ ಮಹಾನ್ ಮಾನವತಾವಾದಿ ಎಂದರು.
ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆಯಲ್ಲಿ, ಮಹಿಳೆಯರು ದಿಗ್ಭಂದನದ ನೋವು ಅನುಭವಿಸುತ್ತಿದ್ದ ದಿನಮಾನಗಳಲ್ಲಿ ಅಕ್ಕನಾಗಮ್ಮ, ಅಕ್ಕಮಹಾದೇವಿ, ಸತ್ಯಕ್ಕ, ಲಕ್ಕಮ್ಮ ಮುಂತಾದ ಶರಣೆಯರಿಗೆ ಜ್ಞಾನ ಭಂಡಾರ ನೀಡುವ ಮೂಲಕ ಮಹಿಳಾ ಸಮಾನತೆಗೆ ನಾಂದಿ ಹಾಡಿದರಲ್ಲದೇ ಅನುಭವ ಮಂಟಪದಲ್ಲಿ ಮೇಲ್ಪಂಕ್ತಿ ಸಾಲುಗಳಲ್ಲಿ ಅವರಿಗೆ ಸ್ಥಾನಮಾನಗ ಳನ್ನು ಕಲ್ಪಿಸಿದ್ದರು ಎಂದರು.
ಈ ಸಂದರ್ಭದಲ್ಲಿ ವಿ.ಬಿ. ಹರಿಹರ, ಎಂ.ಪಿ. ಪಾಟೀಲ, ಭುವನೇಶ್ವರ, ಎಸ್.ಪಿ.ಅಜಗಣ್ಣನವರ, ಧೂಳಪ್ಪನವರ, ನಾಗರಾಜ ಗೂಳೇರ, ಗುಡ್ಡಪ್ಪ ಹುಬ್ಬಳ್ಳಿ, ಕಲ್ಲಪ್ಪ ಮುಂಡಾಸದ, ಹಾಲಮ್ಮನವರ ಎಸ್.ಕೆ. ಕಲ್ಲನಗೌಡ್ರ, ಮಾಲತೇಶ ಓಲೇಕಾರ, ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement