ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮಾನತೆಯ ಹರಿಕಾರ ಬಸವಣ್ಣ: ಶ್ರೀ

Lingaraj Badiger
Updated On : 3 May 2014, 11:59 am

ಹಾವೇರಿ:  ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ನಗರದ ಹೊಸಮಠ ವೃತ್ತದಲ್ಲಿರುವ ಬಸವೇಶ್ವರರ ಕಂಚಿನ ಪುತ್ಥಳಿಗೆ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೂಮಾಲೆ ಅರ್ಪಿಸಿದರು.
ಬಸವೇಶ್ವರರು ಸರ್ವ ಧರ್ಮೀಯರನ್ನು ಸಮಾನವಾಗಿ ಕಂಡವರು. ಸಮಾಜದಿಂದ ದೂರವಿದ್ದ ಜನರನ್ನು ಮುಖ್ಯವಾಹಿನಿಗೆ ತರಲು ಕ್ರಾಂತಿಯನ್ನೇ ಮಾಡಿದವರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ನೀಡಿದವರು ಎಂದು ಶ್ಲಾಘಿಸಿದರು.
12ನೇ ಶತಮಾನದಲ್ಲಿ ಅನುಭವ ಮಂಟಪ ಸರ್ವ ಧರ್ಮ ಸಹಿಷ್ಣತೆಯನ್ನು ಸಾರುವ ಒಂದು ವಿಶ್ವ ವಿದ್ಯಾಲಯವಾಗಿತ್ತು. ಬಸವೇಶ್ವರರು ಮಾದಾರ ಚನ್ನಯ್ಯನ ಮನೆಗೆ ಹೋದಾಗ ರಾಗಿ ಅಂಬಲಿಯನ್ನು ಕೇಳಿ ಪಡೆದಿದ್ದರು. ಅವರ ಒಂದು ವಚನದಲ್ಲಿ ನಡೆ ಚನ್ನ ನುಡಿ ಚನ್ನ ಮಾದರ ಚನ್ನಯ್ಯ ರಾಗಿ ಅಂಬಲಿ ಚನ್ನ ಎಂದು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಹೊಸಮಠದ ಹಲವು ಕಾರ್ಯಕ್ರಮಗಳಲ್ಲಿ ರಾಗಿ ಅಂಬಲಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ ಎಂದುಹೇಳಿದರು.
ಬಸವ ಜಯಂತಿ ಆಚರಣೆ ಬಳಿಕ ಎಲ್ಲರಿಗೂ ರಾಗಿ ಅಂಬಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಗುರಣ್ಣ ಸೀಮಿಕೇರಿ, ಫಕ್ಕಿರಪ್ಪ ಹೂಗಾರ, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಗಿರೀಶ ಗುಮಕಾರ, ನಾಗರಾಜ ತುಪ್ಪದ, ವಿರೂಪಾಕ್ಷಪ್ಪ ಹತ್ತಿಮತ್ತೂರ, ಶಿವಬಸಪ್ಪ ನಿಣ್ಣಿ, ಮುರುಗಯ್ಯ ಹಾಲಯ್ಯನವರಮಠ, ಗಂಗಣ್ಣ ಮಾಸೂರ, ಉಳಿವೆಪ್ಪ ಪಂಪಣ್ಣನವರ, ಇಂದೂಧರ ಎರೆಶೀಮಿ, ಮಾಂತೇಶ ನಿಟವಳ್ಳಿ, ಜಗದೀಶ ಅಂಕಲಕೋಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement