ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಂಘ-ಸಂಸ್ಥೆ ಸೇವೆ ಅವಿಸ್ಮರಣೀಯ: ಕೋಳಿವಾಡ

Rashmi Kasaragodu
Updated On : 4 May 2014, 1:00 am

ರಾಣಿಬೆನ್ನೂರು: ಬಡವರ ಮಕ್ಕಳ ಕಲ್ಯಾಣಕ್ಕಾಗಿ, ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಕ್ಕಾಗಿ ಸಾಮೂಹಿಕ ವಿವಾಹದಂತಹ ಕಾರ್ಯಗಳನ್ನು ನಡೆಸುತ್ತಿರುವ ಸಂಘ-ಸಂಸ್ಥೆಗಳ, ದೇವಸ್ಥಾನ ಕಮಿಟಿಯವರ ಸೇವೆ ಅವಿಸ್ಮರಣೀಯ ಎಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು. ತಾಲೂಕಿನ ಗಂಗಾಪುರ ಗ್ರಾಮದ ಪರಮಕಲ್ಯಾಣಿ ದುರುಗಮ್ಮದೇವಿ ಜಾತ್ರೋತ್ಸವ ಸಮಿತಿಯವರು 27ನೇ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವದ ಅಂಗವಾಗಿ ಏರ್ಪಡಿಸಿದ್ದ 35 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಮ ಕಲ್ಯಾಣಿ ದುರುಗಮ್ಮದೇವಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ವೀರಣ್ಣ ಕಲಾಲ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎಂ.ಎಚ್. ಗುಡಗೂರು, ಬಸವರಾಜ ಹಲವಾಗಲ, ಭೀಮನಗೌಡ ಗಂಗಣ್ಣನವರ, ನಾಗೇಂದ್ರಪ್ಪ ಬಣಕಾರ, ಗ್ರಾಪಂ ಸದಸ್ಯರಾದ ಸೋಮಪ್ಪ ಚಿಕ್ಕಳ್ಳವರ, ಬಸವರಾಜಪ್ಪ, ಶಶಿಧರ ಮಾಷ್ಠಿ, ಗೋವಿಂದಪ್ಪ ಕುಪ್ಪೆಲೂರು ಇತರರಿದ್ದರು.


ಮೌಢ್ಯ ತೊಲಗಿಸಲು ಶ್ರಮಿಸಿದ ಬಸವಣ್ಣ


ಬ್ಯಾಡಗಿ: ಕಂದಾಚಾರ, ಮೂಢನಂಬಿಕೆ ಇನ್ನಿತರ ಸಾಮಾಜಿಕ ಮೌಢ್ಯಗಳನ್ನು ತೊಲಗಿಸಿ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಸಲು ಶ್ರಮಿಸಿದ ದಾರ್ಶನಿಕ ಬಸವೇಶ್ವರ ಆದರ್ಶಗಳು ಸಾರ್ವಕಾಲಿಕ ಎಂದು ಪುರಸಭೆ ಉಪಾಧ್ಯಕ್ಷೆ ಸುಧಾ ಕಳ್ಳಿಹಾಳ ಹೇಳಿದರು. ಪಟ್ಟಣದ ಬಸವೇಶ್ವರ ನಗರದ ಬಸವೇಶ್ವರ ಮೂರ್ತಿಗೆ ಶನಿವಾರ ಹೂವಿನ ಮಾಲೆ ಹಾಕಿ ಮಾತನಾಡಿದ ಅವರು, ಪೌರೋಹಿತ್ಯ ವರ್ಗದವರ ಅಟ್ಟಹಾಸಕ್ಕೆ ಇಡಿ ಸಮಾಜ ಒಡೆದು ಹೋಳಾಗಿತ್ತು. ವರ್ಗ ಮತ್ತು ವರ್ಣ ಪದ್ಧತಿಯಿಂದ ಕಲುಷಿತಗೊಂಡಿದ್ದ ಸಮಾಜವನ್ನು ಮತ್ತೆ ಮುಖ್ಯವಾಹಿನಿಗೆ ತರುವಲ್ಲಿ ಶರಣರು ನಡೆಸಿದ ಪ್ರಯತ್ನ ಸ್ಮರಣೀಯ ಎಂದರು. ಅಧ್ಯಕ್ಷೆ ನೀಲಮ್ಮ ದಾವಣಗೇರಿ, ಮುಖ್ಯಾಧಿಕಾರಿ ಜಿ.ಟಿ. ವೀರೇಶಕುಮಾರ, ವಿರೂಪಾಕ್ಷ ಪೂಜಾರ, ಎಂ.ಪಿ. ಯಲ್ಲಣ್ಣನವರ, ಎಸ್.ಆರ್. ಅಗಡಿ, ನಿರ್ಮಲ ನಾಯ್ಕ, ಮಂಜುಳಾದೇವಿ, ಶುಕ್ಲಾ ಸಾಲ್ಮನಿ, ಮಹಾಂತೇಶ್ ಬೋವಿ, ಗಿರಿಯಪ್ಪನವರ, ಹೊಸಮನಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement