ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾರ್ಮಿಕರು, ಮಾಲೀಕರ ನಡುವೆ ಉತ್ತಮ ಸಂಬಂಧವಿರಲಿ: ಬಸವ

Rashmi Kasaragodu
Updated On : 6 May 2014, 1:04 am

ಗದಗ: ಕಾರ್ಮಿಕರು ಹಾಗೂ ಮಾಲೀಕರ ನಡುವೆ ಉತ್ತಮ ಸಂಬಂಧ ಹೊಂದಿರಬೇಕು. ಅಂದಾಗ ಮಾತ್ರ ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಬಲರಾಮ ಬಸವಾ ಹೇಳಿದರು.
ಅವರು ಈಚೆಗೆ ಬೆಟಗೇರಿಯ ಬಸವಾ ಹ್ಯಾಂಡ್ಲೂಮ್ ಕಾರ್ಖಾನೆಯಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸುವರ್ಣಾ ಲೇಡಿಸ್ ಕ್ಲಬ್ನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುವರ್ಣ ಲೇಡಿಸ್ ಕ್ಲಬ್ ಉತ್ತಮ ಸಮಾಜ ಮುಖಿ ಕಾರ್ಯಕ್ರಮ ಮಾಡುವಲ್ಲಿ ಯಶಸ್ವಿಯಾಗಿದೆ. ಅದರಂತೆ ಮುಂದೆಯೂ ಪರಿಸರ ಸಂರಕ್ಷಣೆ ಹಾಗೂ ನೈರ್ಮಲೀಕರಣದಂತಹ ಕಾರ್ಯಕ್ರಮ ಹಮ್ಮಿಕೊಂಡು ಉತ್ತಮ ಸಮಾಜ ಸೇವೆ ಮಾಡಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷೆ ಶೈಲಜಾ ಕವಲೂರು, ಸುವರ್ಣ ಲೇಡಿಸ್  ಕ್ಲಬ್ನ ಸದಸ್ಯೆ ಗಿರಿಜಾ ಅಕ್ಕೂರ ಮಾತನಾಡಿದರು.
ಸಾವಿತ್ರಿ ಬಸವಾ, ಅನುರಾಧಾ ಬಸವಾ, ರೇಖಾ ಬಸವಾ, ಲತಾ ಬಸವಾ, ಸ್ಮಿತಾ ಬಸವಾ, ಗಾಯತ್ರಿ ಕಬಾಡಿ, ವಿಜಯಲಕ್ಷ್ಮೀ ಪವಾರ, ಕಾರ್ಮಿಕರಾದ ಸಾವಿತ್ರಮ್ಮ, ದೀಪಾ, ಶೀಲಾ, ಸಕ್ಕಮ್ಮ, ಹನುಮವ್ವ, ಶಾಂತಮ್ಮ, ಲಕ್ಷ್ಮಣ, ತುಕಾರಾಮ ಸೇರಿದಂತೆ  ಮುಂತಾದ ಪ್ರಮುಖರು  ಉಪಸ್ಥಿತರಿದ್ದರು. ಭಾರತಿಬಾಯಿ ಬದಿ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement