ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭೂ ಕೈಲಾಸಕ್ಕೆ ಅಂತಿಮ ಹಂತದ ತಯಾರಿ

Rashmi Kasaragodu
Updated On : 6 May 2014, 1:03 am

 ವಿಶ್ವಾಮಿತ್ರ ಹೆಗಡೆ
ಕನ್ನಡಪ್ರಭ ವಾರ್ತೆ, ಶಿರಸಿ, ಮೆ. 5
ತಾಲೂಕಿನ ಗೋಳಿ ಸಿದ್ಧಿವಿನಾಯಕ ನಾಟ್ಯಕಲಾ ಸಂಘದಡಿಯಲ್ಲಿ ಭೂ ಕೈಲಾಸ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. 45 ದಿನಗಳಿಂದ ರಂಗತಾಲೀಮು ನಡೆಸಿರುವ ಪಾತ್ರಧಾರಿಗಳು ಸೋಮವಾರ ವೇಷ ಭೂಷಣಗಳಿಂದೊಡಗೂಡಿ ರಂಗ ತಾಲೀಮು ನಡೆಸುತ್ತಿದ್ದಾರೆ.
ವಿ.ಆರ್. ಭಟ್ಟ ಠೊಣ್ಣೆಮನೆ ಮತ್ತು ಎಂ.ಎಲ್. ಹೆಗಡೆ ಹಲಸಗಿ ನೇತೃತ್ವದಲ್ಲಿ ಅಹೋರಾತ್ರಿ ತಯಾರಿಯ ಕೆಲಸ ಭರದಿಂದ ಸಾಗಿದೆ. ಅಂದಾಜು 100 ಸ್ವಯಂ ಸೇವಕರು ಹಗಲಿರುಳೆನ್ನದೇ ನಾಟಕದ ತಯಾರಿಗಾಗಿ ದುಡಿಯುತ್ತಿದ್ದಾರೆ. ಸುತ್ತಮುತ್ತಲ ಹತ್ತೂರುಗಳಿಂದ ಆಗಮಿಸುತ್ತಿರುವ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ದುಡಿಯುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಪ್ರತಿಫಲಾಪೇಕ್ಷೆಯಿಲ್ಲದೇ ದುಡಿಯುತ್ತಿರುವ ಮನೋಭಾವವನ್ನು ಮೆಚ್ಚಲೇಬೇಕಾಗಿದೆ. ಗೋಳಿಯಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಅದು ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತದೆ ಎನ್ನುವ ಪ್ರತೀತಿಗೆ ಮತ್ತೊಮ್ಮೆ ಭೂ ಕೈಲಾಸ ನಾಟಕ ಸಾಕ್ಷಿಯಾಗಲಿದೆ. ರಂಗ ಸಜ್ಜಿಕೆಯ ತಯಾರಿಯಲ್ಲಿ ಎಂ.ಎಸ್. ಹೆಗಡೆ ಮುತ್ಮುರ್ಡು, ಎಚ್.ವಿ. ಗಣೇಶ ತಟ್ಟಗುಣಿ, ಎಂ.ಎಲ್. ಹೆಗಡೆ ಹಲಸಗಿ, ಉದಯ ಹೆಗಡೆ ಕಿಬ್ಬಳ್ಳಿ, ರವಿ ಹೆಗಡೆ ಊರತೋಟ, ಚಂದ್ರು ಹೆಗಡೆ ಅಮ್ಮಚ್ಚಿ ಈ ಮುಂತಾದ ಹಲವರು ಮನೆಯ ಕೆಲಸವನ್ನು ಬದಿಗಿಟ್ಟು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪಾತ್ರಧಾರಿಗಳು: ರಂಗದ ಮೇಲೆ ರಾವಣನಾಗಿ ಉದಯ ಭಟ್ ಕಬ್ಬಳ್ಳಿ, ನಾರದನಾಗಿ ಕೃಷ್ಣ ಹೆಗಡೆ, ಈಶ್ವರನಾಗಿ ರಾಜೇಶ ಭಟ್ ಕಬ್ಬಳ್ಳಿ, ಕುಬೇರನಾಗಿ ದಿನೇಶ ಹೆಗಡೆ ಮತ್ತಿಘಟ್ಟ, ಮಯಾಸುರನಾಗಿ ಸುರೇಶ ಹೆಗಡೆ ಬಪ್ಪನಳ್ಳಿ, ವಿಷ್ಣುವಿನ ಪಾತ್ರದಲ್ಲಿ ಸತ್ಯನಾರಾಯಣ ಭಟ್ಟ, ಗಣಪತಿಯಾಗಿ ಗೌರವ ಹೆಗಡೆ ಊರತೋಟ, ಪ್ರಹಸ್ತನಾಗಿ ಶ್ರೀಪತಿ ಹೆಗಡೆ ನೇರ್ಲದ್ದ, ವಿಭೀಷಣನಾಗಿ ಗಣೇಶ ಹೆಗಡೆ ಹಾರುಗಾರ್, ಇಂದ್ರನಾಗಿ ರಮೇಶ ಹೆಗಡೆ ಕಾಟೀಮನೆ, ವರುಣನಾಗಿ ಬಂಗಾರೇಶ್ವರ ಹೆಗಡೆ ತಟ್ಟಗುಣಿ, ಅಗ್ನಿಯ ಪಾತ್ರದಲ್ಲಿ ಮಹಾಬಲೇಶ್ವರ ಹೆಗಡೆ ಹಳ್ಳಕೈ, ವಾಯುವಿನ ಪಾತ್ರದಲ್ಲಿ ಉಮಾಪತಿ ಹೆಗಡೆ ಇಳ್ಳುಮನೆ, ಯಮನಾಗಿ ವೆಂಕಟ್ರಮಣ ಭಟ್ ಹಣಜಿಮನೆ, ಮಹಾದಂತನಾಗಿ ರವೀಂದ್ರ ಹೆಗಡೆ ಯಲ್ಗೊಡಮನೆ, ವಕ್ರದಂತನಾಗಿ ಸುರೇಶ ಹೆಗಡೆ ಬಪ್ಪನಳ್ಳಿ, ನೇರದಂತನಾಗಿ ರವೀಂದ್ರ ಹೆಗಡೆ ಯಲ್ಗೊಡಮನೆ, ಚರದಂತನಾಗಿ ಎಂ.ಆರ್. ಹೆಗಡೆ ಗೊಳ್ಗೊಡು, ಸ್ಥಿರದಂತನಾಗಿ ಪ್ರಶಾಂತ ಹೆಗಡೆ ದೊಡ್ಮನೆ, ನಂದಿಯಾಗಿ ಬಂಗಾರೇಶ್ವರ ಹೆಗಡೆ ತಟ್ಟಗುಣಿ ಬಣ್ಣ ಹಚ್ಚುತ್ತಿದ್ದಾರೆ. ಮಯಾಸುರನ ಸೇವಕನಾಗಿ ರಮೇಶ ಹೆಗಡೆ ಕಾಟೀಮನೆ, ರಾವಣನ ಸೇನಾಧಿಪತಿಯಾಗಿ ಕಿರಣ ಭಟ್, ರಾವಣನ ದಂಡ ನಾಯಕನಾಗಿ ದತ್ತಾತ್ರೇಯ ಹೆಗಡೆ ಸರಕುಳಿ, ವಟುವಿನ ಪಾತ್ರಧಾರಿಯಾಗಿ ಚಂದನ ಹೆಗಡೆ ಹಲಸಿಗೆ, ಕೈಕಸೆಯಾಗಿ ಗಂಗಾ ವಿ.ಭಟ್, ಟೋಣ್ಣೆಮನೆ, ಮಂಡೋದರಿಯಾಗಿ ನವ್ಯಾ ಭಟ್, ಪಾರ್ವತಿಯಾಗಿ ಅನುರಾಧಾ ಹೆಗಡೆ, ಲಕ್ಷ್ಮೀಯಾಗಿ ಮಹಿಮಾ ಹೆಗಡೆ ಹಲಸಿಗೆ, ಮಂಡೋದರಿ ಸಖಿಯರ ಪಾತ್ರದಲ್ಲಿ ಕೀರ್ತಿ ಭಟ್ ಅಮ್ಮಚ್ಚಿ, ಚೈತ್ರಾ ಹೆಗಡೆ ಅಮ್ಮಚ್ಚಿ, ಕೈಕಸೆಯ ಪರಿಚಾರಿಕೆ ಮಗುವಿನ ಪಾತ್ರದಲ್ಲಿ ಶ್ವೇತಾ ಬಂದಳಿಕೆ, ಕಾಳಿಯ ಪಾತ್ರದಲ್ಲಿ ವಾಸಂತೀ ಹೆಗಡೆ ದೊಡ್ಮನೆ, ನರ್ತಕಿ-ರಾವಣ ಆಸ್ಥಾನದಲ್ಲಿ ಅನುರಾಧಾ ಹೆಗಡೆ, ನರ್ತಕಿ-ಇಂದ್ರ ಆಸ್ಥಾನದಲ್ಲಿ ನವ್ಯಾ ಭಟ್ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಎಂ.ವಿ. ಹೆಗಡೆ ಬೆಕ್ಮನೆ, ಶೈಲಾ ಹೆಗಡೆ ಹಲಸಿನಳ್ಳಿ, ಚೈತ್ರಾ ಹೆಗಡೆ ಕಿಬ್ಬಳ್ಳಿ, ನಟವಂಗದಲ್ಲಿ ಕೀರ್ತನಾ ರಾ. ಹೆಗಡೆ, ಟೊಣ್ಣೆಮನೆ ಹಿನ್ನೆಲೆಯಲ್ಲಿ ಸಂಗೀತ ನೀಡುತ್ತಿದ್ದಾರೆ. ಅನುರಾಧಾ ರಾ. ಹೆಗಡೆ ಟೋಣ್ಣೆಮನೆ ನೃತ್ಯ ಸಂಯೋಜಿಸಿದ್ದಾರೆ. ಮಹೇಶ ಭಟ್ಟ ಕಲ್ಲಳ್ಳಿ (ದಾಯಿಮನೆ) ಹಾಮೋನಿಯಂ, ರಮೇಶ ಹೆಗಡೆ ಕಾನಗೋಡು ತಬಲಾ ಸಾಥ್ ನೀಡುತ್ತಿದ್ದಾರೆ. ಸುರೇಶ ಹೆಗಡೆ ಬಪ್ಪನಳ್ಳಿ, ರವೀಂದ್ರ ಹೆಗಡೆ ಯಲಗೊಡಮನೆ, ವಿನಾಯಕ ಹೆಗಡೆ ತಾರೇಹಳ್ಳಿ, ಗುರು ಭಟ್ ಹೊಸ್ಮನೆ, ಮಹಾಬಲೇಶ್ವರ ಭಟ್ಟ ಟೋಣ್ಣೆಮನೆ, ರವೀಂದ್ರ ಹೆಗಡೆ ಊರತೋಟ, ರಾಮಚಂದ್ರ ಭಟ್ ಹೊಸ್ಮನೆ, ಮಂಜುನಾಥ ಹೆಗಡೆ, ಊರತೋಟ, ಪ್ರದೀಪ ಹೆಗಡೆ ತಾರೇಹಳ್ಳಿ ರಂಗಸಜ್ಜಿಕೆಯ ಹೊಣೆ ಹೊತ್ತಿದ್ದಾರೆ. ಕಾರ್ತಿಕ್ ಸೌಂಡ್ ಸಿಸ್ಟೆಮ್ ಶಿರಸಿ ಬೆಳಕು ಮತ್ತು ಧ್ವನಿವರ್ಧಕ ವ್ಯವಸ್ಥೆ ಕೈಗೊಂಡಿದ್ದಾರೆ.  ರಾಜಶೇಖರ ಹೆಗಡೆ ಕೊಪ್ಪೆಸರ, ನರೇಂದ್ರ ಹೆಗಡೆ ಊರತೋಟ, ಜಗ್ಗು ಬೊಮ್ಮನಳ್ಳಿ ಊಟೋಪಚಾರದ ಹೊಣೆ ಹೊತ್ತುಕೊಂಡಿದ್ದಾರೆ. ಜಿ.ಆರ್. ಹೆಗಡೆ ಕಿಬ್ಬಳ್ಳಿ, ಜಿ.ಎಸ್. ಹೆಗಡೆ ಗೋಳ್ಗೋಡು, ಜಿ.ಎನ್. ಹೆಗಡೆ ಹಾವಳಿಮನೆ, ಎಂ.ಆರ್. ಹೆಗಡೆ ಕಾನ್ಗೋಡ, ಸುಬ್ರಾಯ ಆಚಾರಿ ಹಾರುಗಾರ್, ವಿ.ಟಿ. ಹೆಗಡೆ ಕೊಪ್ಪೆಸರ ವರ್ಣಾಲಂಕಾರ ಕೈಗೊಳ್ಳುತ್ತಿದ್ದರೆ, ಶ್ರೀಧರ ಭಟ್ಟ ದೊಡ್ಮನೆ, ವಿ.ಜಿ. ಭಟ್ಟ ತಡುಗುಣಿ, ವಿಶ್ವನಾಥ ಹೆಗಡೆ ಹಳ್ಳಕೈ, ಜಿ.ಪಿ. ಹೆಗಡೆ ಬಪ್ಪನಳ್ಳಿ (ದೇಶವಾನಿಮನೆ), ಹೇಮಾವತಿ ಆರ್. ಭಟ್ ಗೋಳಿ, ಲಕ್ಷ್ಮೀ ಗ ಹೆಗಡೆ ಕಿಬ್ಬಳ್ಳಿ ವಸ್ತ್ರಾಲಂಕಾರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ದೀವಸ್ಪತಿ ತಿ ಹೆಗಡೆ ಕೊಪ್ಪೆಸರ, ಚಂದ್ರಶೇಖರ ಹೆಗಡೆ ಅಮ್ಮಚ್ಚಿ, ಮಂಜುನಾಥ ಹೆಗಡೆ, ಮಹಾಬ್ಲೇಶ್ವರ ಭಟ್ಟ ಟೋಣ್ಣೆಮನೆ, ದತ್ತಗುರು ಭಟ್ಟ ಟೋಣ್ಣೆಮನೆ, ರವಿ ಹೆಗಡೆ ಮಣ್ಕಣಿ, ಲಕ್ಷ್ಮೀಕಾಂತ ಹೆಗಡೆ ಹೊಸಳ್ಳಿ, ನಾರಾಯಣ ಹೆಗಡೆ ಹೊಸಳ್ಳಿ, ಸೀತಾರಾಮ ಭಟ್ಟ್ ಅಮ್ಮಚ್ಚಿ, ಮಂಜುನಾಥ ಹೆಗಡೆ ಅಡ್ಲೆಮನೆ, ಪರಮೇಶ್ವರ ಹೆಗಡೆ ಕೊಪ್ಪೆಸರ, ಮಹೇಂದ್ರ ಹೆಗಡೆ ಅಮ್ಮಚ್ಚಿ, ಗಣೇಶ ಹೆಗಡೆ ಕೊಪ್ಪೆಸರ, ಶಿವಾನಂದ ಮಂ. ಹೆಗಡೆ, ಹರಿಶ್ಚಂದ್ರ ಸು. ಹೆಗಡೆ, ಸಂತೋಷ ಗಂ. ಹೆಗಡೆ, ಹರೆರಾಮ್ ನ. ಹೆಗಡೆ, ಪ್ರಕಾಶ ಶ್ರೀ ಹೆಗಡೆ, ಪ್ರಸನ್ನ ಶ್ರೀ ಹೆಗಡೆ, ಶಂಕರನಾರಾಯಣ ಗ. ಭಟ್ಟ್, ದತ್ತಾತ್ರೇಯ ಗ. ಹೆಗಡೆ, ಹಳದೋಟ, ಲೋಕೇಶ ಗ. ಹೆಗಡೆ ದೊಡ್ಮನೆ, ಪ್ರಶಾಂತ ರ. ಹೆಗಡೆ ದೊಡ್ಮನೆ, ರಾಮನಾಥ ವಿ. ಹೆಗಡೆ, ಸುರೇಶ ಕೇಶವ ಹೆಗಡೆ, ವಿನಾಯಕ ಎಸ್. ಹೆಗಡೆ, ಮಹೇಶ ಗ. ಹೆಗಡೆ, ಹಲಸಿಗೆ ಚಪ್ಪರ ಚಾವಡಿಯ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ. ವಾರದಿಂದ ದಿನಂಪ್ರತಿ ಎನ್ನುವಂತೆ ಮಳೆ ಸುರಿಯುತ್ತಿದ್ದರೂ ನಾಟಕದ ತಯಾರಿಗೆ ಯಾವುದೇ ಅಡ್ಡಿಯುಂಟಾಗಿಲ್ಲ. ಗಾಳಿ, ಮಳೆಯ ರಭಸಕ್ಕೆ ಚಿಕ್ಕಪುಟ್ಟ ಅಡಚಣೆ ಉಂಟಾದರೂ ತಕ್ಷಣವೇ ಅದನ್ನು ಸರಿಪಡಿಸಲಾಗುತ್ತಿದೆ. ಊರವರ ಒಗ್ಗಟ್ಟು ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ನಡೆಯುವ ನಾಟಕದ ಸಂದರ್ಭದಲ್ಲಿ ಬಹಿರಂಗಗೊಳ್ಳುತ್ತಿದೆ. ಇಲ್ಲಿ ಪಕ್ಷಬೇಧವಿಲ್ಲ. ಯಾರಿಗೂ ಯಾವುದೇ ಪೂರ್ವಾಗ್ರಹವಿಲ್ಲ. ಸ್ವಪ್ರತಿಷ್ಟೆಗೆ ಅವಕಾಶವಿಲ್ಲ. ಎಲ್ಲರೂ ಒಂದೇ ಭಾವನೆಯಿಂದ ದೇವರ ಸೇವೆಯಂತೆ ದುಡಿಯುತ್ತಿರುವುದು ಮಾದರಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement