ಚರಂಡಿ ಸ್ವಚ್ಛಗೊಳಿಸಲು ಆಗ್ರಹ
ಶಿಗ್ಗಾಂವಿ: ಪಟ್ಟಣದ ಮುಖ್ಯ ರಸ್ತೆಯ ರಾಜಶ್ರೀ ಚಿತ್ರಮಂದಿರದ ಎದುರಿನ ಪುರಸಭೆಯ ಮಳಿಗೆಗಳ ಎದುರಿಗೆ ಇರುವ ಚರಂಡಿ ತೆಗೆದು ಸುಮಾರು 15 ದಿನ ಕಳೆದರೂ ಇಲ್ಲಿಯವರೆಗೂ ಅದರ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದರೂ ಕ್ರಮ ಜರುಗಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಹಾಗೂ ಮಳಿಗೆಗಳ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ಗೆ ಮನವಿ ಅರ್ಪಿಸಿ, ಆಗ್ರಹಿಸಿದರು.
ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು, ಸಾವಿರಾರು ವಾಹನಗಳು ಇದೇ ರಸ್ತೆ ಮೂಲಕ ಓಡಾಡುತ್ತಿರುವುದರಿಂದ ಒಂದಿಲ್ಲೊಂದು ಅವಘಡ ಸಂಭವಿಸುತ್ತಲಿವೆ. ಇದರಿಂದ ಎಚ್ಚೆತ್ತ ಮಳಿಗೆಗಳ ವ್ಯಾಪಾರಸ್ಥರು ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಚಾಕಾಪುರ ಗ್ರಾಮ ಘಟಕದ ಅಧ್ಯಕ್ಷ ರಾಮಕೃಷ್ಣ ಮೊತೆನವರ, ಜಯಕರ್ನಾಟಕ ತಾಲೂಕು ಸಂಘಟನೆ ಕಾರ್ಯದರ್ಶಿ ರವಿ ಓಲೇಕಾರ, ಜಯಕರ್ನಾಟಕ ಪದಾಧಿಕಾರಿಗಳಾದ ಗದಿಗೆಪ್ಪ ಸಿಂಗಾಪುರ, ನಿಂಗಪ್ಪ ಮೋಟಳ್ಳಿ, ವಿಜುನಗೌಡ ಪಾಟೀಲ ಹಾಗೂ ಮಳಿಗೆಗಳ ವ್ಯಾಪಾರಸ್ಥರಾದ ಡಾ. ವಿಜಯಕುಮಾರ, ಪ್ರಕಾಶ ಹಾರೆರ, ಶಿವಾನಂದ ನವಲಗುಂದ, ಸುನೀಲ ಬಳಿಗಾರ, ಬಸಯ್ಯ ಚಿಕ್ಕಮಠ, ತಿಪ್ಪಣ್ಣ, ದಿವಾಕರ ಜೈನ್, ಸೋಮಣ್ಣ ಬಾದಾಮಗಟ್ಟಿ, ಬಸವರಾಜ ಎಲಿಗಾರ ಇದ್ದರು.