ಮುಂಡರಗಿ: ಶೇ. 82.07 ಫಲಿತಾಂಶ
ಮುಂಡರಗಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಂಡರಗಿ ತಾಲೂಕು ಒಟ್ಟು ಫಲಿತಾಂಶ ಶೇ. 82.07ರಷ್ಟಾಗಿದೆ. ತಾಲಕಿನಲ್ಲಿರುವ 6 ಪ್ರೌಢಶಾಲೆಗಳು ನೂರಕ್ಕೆ ನೂರು ಫಲಿತಾಂಶ ನೀಡುವ ಮೂಲಕ ತಾಲೂಕಿಗೆ ಕೀರ್ತಿ ತಂದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ತಾಲೂಕಿನಲ್ಲಿ ಒಟ್ಟು 18 ಸರ್ಕಾರಿ ಪ್ರೌಢಶಾಲೆಗಳು (ಮೊರಾರ್ಜಿ ವಸತಿ ಶಾಲೆ ಮತ್ತು ರಾಣಿ ಚನ್ನಮ್ಮ ವಸತಿ ಶಾಲೆ), 13 ಅನುದಾನಿತ ಪ್ರೌಢಶಾಲೆಗಳು ಮತ್ತು 5 ಅನುದಾನರಹಿತ ಪ್ರೌಢಶಾಲೆಗಳು ಇವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 717 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 616 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿಶತ ಫಲಿತಾಂಶ ಶೇ 85.91ರಷ್ಟಾಗಿದೆ. ಅನುದಾನಿತ ಪ್ರೌಢಶಾಲೆಗಳಲ್ಲಿ 781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 609 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರತಿಶತ ಶೇ. 77.97 ಫಲಿತಾಂಶ ನೀಡಿದ್ದಾರೆ. ಅನುದಾನರಹಿತ ಪ್ರೌಢಶಾಲೆಗಳಲ್ಲಿ ಒಟ್ಟು 114 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರತಿಶತ ಶೇ. 85.96 ಫಲಿತಾಂಶ ಬಂದಿದೆ.
ಸ್ಥಾನ: ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಮುಂಡರಗಿ ಸರ್ಕಾರಿ ಉರ್ದು ಪ್ರೌಢಶಾಲೆ, ಯಕ್ಲಾಸಪೂರ ಸರ್ಕಾರಿ ಪ್ರೌಢಶಾಲೆ, ಹಳ್ಳಿಕೇರಿ ಸರ್ಕಾರಿ ಪ್ರೌಢಶಾಲೆ ಮತ್ತು ಹಿರೇವಡ್ಡಟ್ಟಿ ಮೊರಾರ್ಜಿ ವಸತಿ ಶಾಲೆ ಶೇ. 100ರಷ್ಟು ಫಲಿತಾಂಶ ನೀಡಿ ಮೊದಲ ಸ್ಥಾನದಲ್ಲಿದ್ದರೆ, ಸರ್ಕಾರಿ ಪ್ರೌಢಶಾಲೆ ಮೇವುಂಡಿ ಶೇ. 97.36ರಷ್ಟು ಫಲಿತಾಂಶ ನೀಡಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದೆ. ಬರದೂರ ಸರ್ಕಾರಿ ಪ್ರೌಢಶಾಲೆ ಶೇ. 95.45ರಷ್ಟು ಫಲಿತಾಂಶ ನೀಡಿ ತೃತೀಯ ಸ್ಥಾನ ಪಡೆದುಕೊಂಡಿದೆ.
ಅನುದಾನಿತ ಪ್ರೌಢಶಾಲೆಗಳಲ್ಲಿ ಕೆ.ಎಚ್.ಕೆ. ಕೊರ್ಲಹಳ್ಳಿ ಪ್ರೌಢಶಾಲೆ ಶೇ. 89.79ರಷ್ಟು ಫಲಿತಾಂಶ ನೀಡಿ ಪ್ರಥಮ ಸ್ಥಾನ, ಜೆ.ಟಿ.ವಿ.ಪಿ. ಡಂಬಳ ಪ್ರೌಢಶಾಲೆ ಶೇ. 88.55ರಷ್ಟು ಫಲಿತಾಂಶ ನೀಡಿ ದ್ವಿತೀಯ ಸ್ಥಾನ ಮತ್ತು ಎಸ್.ಜೆ.ಎಂ. ಕಲಕೇರಿ ಪ್ರೌಢಶಾಲೆ ಶೇ. 88.46ರಷ್ಟು ಫಲಿತಾಂಶ ನೀಡಿ ತೃತೀಯ ಸ್ಥಾನಗಳಿಸಿದೆ. ಅನುದಾನರಹಿತ ಪ್ರೌಢಶಾಲೆಗಳಲ್ಲಿ ಎಸ್.ಎಫ್.ಎಸ್. ಮುಂಡರಗಿ ಮತ್ತು ಜೆ.ಎ. ಆಂಗ್ಲ ಮಾಧ್ಯಮ ಶಾಲೆ ಮುಂಡರಗಿ ಶೇ. 100ರಷ್ಟು ಫಲಿತಾಂಶ ನೀಡಿ ಪ್ರಥಮ ಸ್ಥಾನದಲ್ಲಿವೆ. ಮುಂಡರಗಿ ವಿ.ಜಿ. ಲಿಂಬಿಕಾಯಿ ಪ್ರೌಢಶಾಲೆ ಶೇ. 89.79 ಫಲಿತಾಂಶ ನೀಡಿ ದ್ವಿತೀಯ ಸ್ಥಾನ ಗಳಿಸಿದೆ ಎಂದು ತಿಳಿಸಿದ್ದಾರೆ.ತಾಲೂಕಿಗೆ ಹಿರೇವಡ್ಡಟ್ಟಿ ಮೊರಾರ್ಜಿ ವಸತಿ ಶಾಲೆಯ ಅಶೋಕ ಲಮಾಣಿ ಶೇ. 94.72 (592) ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಡಂಬಳ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಸಂಧ್ಯಾ ನಂದರಗಿ ಶೇ. 93.44 (584) ಅಂಕಗಳಿಸಿ ದ್ವಿತೀಯ ಸ್ಥಾನ ಮತ್ತು ಸರ್ಕಾರಿ ಪ್ರೌಢಶಾಲೆ ಶಿಂಗಟಾಲೂರ ಶಾಲೆಯ ಮಣಿಕಂಠ ಗಡ್ಡದದೇವರಮಠ ಶೇ. 91.68 (573) ರಷ್ಟು ಅಂಕಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಎಂ.ಎ. ರಡ್ಡೇರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.